ಚೆನ್ನೈ: ಮೆಟ್ರೋ ನಗರಗಳಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ. ಆದರೆ ಲಾಕ್ಡೌನ್ ನಿರ್ಬಂಧಗಳಿಂದಾಗಿ ಪ್ರಯಾಣಕ್ಕೆ ಸಮಸ್ಯೆಯಾಗಿರುವುದರಿಂದ ಜನರ ಅನುಕೂಲಕ್ಕಾಗಿ ಬೃಹತ್ ಚೆನ್ನೈ ಪಾಲಿಕೆ (ಜಿಸಿಸಿ) ಜನರ ಮನೆಬಾಗಿಲಿಗೇ ಬಂದು ಲಸಿಕೆ ಕೊಡುವುದಾಗಿ ಹೇಳಿದೆ.

ಅಪಾರ್ಟ್ಮೆಂಟ್, ವಸತಿ ಸಮುಚ್ಛಯ ಮತ್ತು ಹೆಚ್ಚು ಜನರು ಒಂದೆಡೆ ಸೇರಬಹುದಾದ ಸ್ಥಳವಿದ್ದರೆ ಅಂತಹ ತಾಣಕ್ಕೆ ಬಂದು ಜನರಿಗೆ ಲಸಿಕೆ ನೀಡುವ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಚೆನ್ನೈ ಪಾಲಿಕೆ ಸೋಮವಾರ ತಿಳಿಸಿದೆ.

ಪ್ರಸ್ತುತ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲು ಪಾಲಿಕೆ ಮುಂದಾಗಿದೆ. 45ಕ್ಕಿಂತ ಕಡಿಮೆ ವಯಸ್ಸಿನವರಿಗೆ ಮುಂದಿನ ಹಂತದಲ್ಲಿ ಲಸಿಕೆ ನೀಡುವ ಯೋಜನೆಯಿದೆ ಎಂದು ಪಾಲಿಕೆ ಹೇಳಿದೆ.

ಕೋವಿಡ್ ಲಸಿಕೆ ಡೋಸ್ಗಳ ನಡುವೆ ಅಂತರ ಹೆಚ್ಚಳ: ‘ಗಿಮಿಕ್’ ಅಲ್ಲ, ತಜ್ಞರ ಶಿಫಾರಸು

ಜನರು ಲಸಿಕೆ ಪಡೆಯಲು ಕೆಲವೊಮ್ಮೆ ದೂರದ ಸ್ಥಳಗಳಿಗೆ ತೆರಳಬೇಕಾಗುತ್ತದೆ. ಸಾರಿಗೆ ಸೌಲಭ್ಯವಿಲ್ಲದಿದ್ದರೆ ಮತ್ತು ಕೋವಿಡ್ ನಿಯಮಾವಳಿ ಪಾಲಿಸದಿದ್ದರೆ ಅವರಿಗೆ ತೊಂದರೆಯಾಗಬಹುದು. ಹೀಗಾಗಿ ಜನರ ಅನುಕೂಲಕ್ಕಾಗಿ, ಸುಮಾರು 30 ರಷ್ಟು ಮಂದಿ ಒಂದೆಡೆ ಸೇರುವಂತಾದರೆ ಅಲ್ಲಿಗೆ ಬಂದು ಲಸಿಕೆ ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

ಕೋವಿಡ್ ಹೆಚ್ಚಿರುವ ರಾಜ್ಯ, ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.