ನವದೆಹಲಿ: ಭಾರತದಲ್ಲಿ ಕೊರೊನಾದ ಮೂರನೇ ಅಲೆ ಎರಡನೇ ಅಲೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ಪುನರುತ್ಪಾದನೆ ಸಾಮರ್ಥ್ಯ (‘ಆರ್’ ಮೌಲ್ಯ) ಹೊಂದಿದೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಮೂರನೇ ಅಲೆಗೆ ಮುಖ್ಯ ಕಾರಣ ಓಮೈಕ್ರಾನ್. ಇದು 2.69 ರ ಪ್ರಮಾಣದಲ್ಲಿ ಪುನರುತ್ಪಾದನೆ ಸಾಮರ್ಥ್ಯ ಹೊಂದಿದೆ. ಅಂದರೆ 100 ಓಮೈಕ್ರಾನ್ ಸೋಂಕಿತರು 269 ಜನರಿಗೆ ಸೋಂಕು ಹರಡಬಹುದು ಎಂದು ನೀತಿ ಆಯೋಗದ ಸದಸ್ಯ ಹಾಗೂ ಕೋವಿಡ್ ಸಲಹಾ ಸಮಿತಿಯ ಸದಸ್ಯ ವಿ.ಕೆ ಪೌಲ್ ಹೇಳಿದ್ದಾರೆ.

ಕೊರೊನಾದ ಎರಡನೇ ಅಲೆ ವೇಳೆ ಡೆಲ್ಟಾ 1.69 ಪುನರುತ್ಪಾದನೆ ಸಾಮರ್ಥ್ಯ ಹೊಂದಿತ್ತು ಎಂದು ಪೌಲ್ ಹೇಳಿದ್ದಾರೆ.

ಆರ್ ನಂಬರ್ ಎಂಬುದು ಸಾಂಕ್ರಾಮಿಕದ ಹರಡುವಿಕೆ ಸಾಮರ್ಥ್ಯವನ್ನು ಅಳೆಯಲು ತಜ್ಞರು ಬಳಸುವ ಮಾನದಂಡವಾಗಿದೆ.

ಬಿಹಾರ: 11 ಸಲ ಕೋವಿಡ್ ಲಸಿಕೆ ಹಾಕಿಸಿ 12ನೇ ಬಾರಿಗೆ ಸಿಕ್ಕಿಬಿದ್ದ ವೃದ್ಧ!

ಇನ್ನುದೇಶದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಏರಿಕೆಯಾಗಿವೆ. ಬುಧವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 58,097 ಹೊಸ ಪ್ರಕರಣಗಳು ವರದಿಯಾಗಿವೆ. ಇದು 199 ದಿನಗಳಲ್ಲೇ ಅಧಿಕ. ಹೀಗಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷವನ್ನು ದಾಟಿದೆ. ಒಂದೇ ದಿನ 534 ಜನರು ಮೃತಪಟ್ಟಿದ್ದಾರೆ.

ದೇಶದ 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ದಿನ 2,135 ಓಮೈಕ್ರಾನ್ ಪ್ರಕರಣ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 653 ಪ್ರಕರಣ ಕಂಡುಬಂದಿವೆ. ದೆಹಲಿಯಲ್ಲಿ 464, ಕೇರಳದಲ್ಲಿ 185, ರಾಜಸ್ಥಾನದಲ್ಲಿ 174, ಗುಜರಾತ್‌ನಲ್ಲಿ 154 ಮತ್ತು ತಮಿಳುನಾಡಿನಲ್ಲಿ 121 ಸೋಂಕಿತರು ಪತ್ತೆಯಾಗಿದ್ದಾರೆ.

ದೇಶದಲ್ಲಿ ಕಳೆದ 8 ದಿನಗಳ ಅವಧಿಯಲ್ಲಿ ಕೋವಿಡ್ ಪ್ರಕರಣಗಳು 6.3 ಪಟ್ಟು ಹೆಚ್ಚಾಗಿವೆ. ಕೋವಿಡ್ ದೃಢಪಡುವ ಪ್ರಮಾಣವು ಶೇ 0.79ರಿಂದ ಶೇ 5.03ಕ್ಕೆ ಜಿಗಿತ ಕಂಡಿದೆ.

ಓಮೈಕ್ರಾನ್:ದೇಶದಲ್ಲಿಮೊದಲ ಸಾವು

ಕೊರೊನಾ ವೈರಸ್‌ನ ರೂಪಾಂತರ ತಳಿ ‘ಓಮೈಕ್ರಾನ್’ನಿಂದ ದೇಶದಲ್ಲಿ ಮೊದಲ ಸಾವು ಸಂಭವಿಸಿದೆ. ರಾಜಸ್ಥಾನದ ಉದಯಪುರದಲ್ಲಿ ಓಮೈಕ್ರಾನ್ ತಗುಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಓಮೈಕ್ರಾನ್ ಕಾಣಿಸಿಕೊಂಡಿದ್ದ 73 ವರ್ಷದ ವ್ಯಕ್ತಿ ಡಿ.31ರಂದು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಂದ ವ್ಯಕ್ತಿ ಮೃತಪಟ್ಟಿದ್ದಾರೆ.ಅವರು ಮಧುಮೇಹ, ರಕ್ತದೊತ್ತಡ,ಹೈಪೋಥೈರಾಯ್ಡಿಸಮ್, ಮೆಲ್ಲಿಟಸ್ ಮೊದಲಾದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಉದಯಪುರದ ಮುಖ್ಯ ಆರೋಗ್ಯಾಧಿಕಾಕಾರಿ ಡಾ. ದಿನೇಶ್ ಖರಾಡಿ ತಿಳಿಸಿದ್ದಾರೆ.

ಓಮೈಕ್ರಾನ್ ಮುನ್ನೆಚ್ಚರಿಕೆ: ಹೋಂ ಐಸೊಲೇಷನ್ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.