ಮುಂಬೈ: ‘ತೌತೆ’ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರದಲ್ಲಿ ಸಿಲುಕಿದ್ದ ಟಗ್ ಬೋಟ್ ವರಪ್ರದವನ್ನು ಭಾರತೀಯ ನೌಕಾಪಡೆಯ ಐಎನ್‌ಎಸ್ ‘ಮಕರ್’ ಸೋಮವಾರ ಪತ್ತೆ ಹಚ್ಚಿದೆ.

‘ಮೇ 17ರಂದು ಅರಬ್ಬಿ ಸಮುದ್ರದಲ್ಲಿಪಿ305 ಬಾರ್ಜ್ ಮತ್ತು ವರಪ್ರದದ 274 ಸಿಬ್ಬಂದಿ ನಾಪತ್ತೆಯಾಗಿದ್ದರು. ಈ ಪೈಕಿ ಬಾರ್ಜ್‌ನಿಂದ 186 ಮಂದಿ ಮತ್ತು ವರಪ್ರದದಿಂದ ಇಬ್ಬರನ್ನು ರಕ್ಷಿಸಲಾಗಿತ್ತು. 70 ಮಂದಿಯ ಶವಗಳು ಸಮುದ್ರದಲ್ಲಿ ಪತ್ತೆಯಾಗಿದ್ದವು. ಸೋಮವಾರ274 ಸಿಬ್ಬಂದಿ ಪೈಕಿ ಬಾಕಿ ಉಳಿದಿದ್ದ 16 ಮಂದಿಯ ಶವವೂ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯಲ್ಲಿ ಪತ್ತೆಯಾಗಿವೆ’ ಎಂದು ನೌಕಾಪಡೆಯ ವಕ್ತಾರರು ತಿಳಿಸಿದರು.

‘ಈ ಮೂಲಕ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ 274 ಸಿಬ್ಬಂದಿಯ ಲೆಕ್ಕಚಾರ ಸಿಕ್ಕಿವೆ.ಹಾಗಿದ್ದರೂ ಒಂದು ವೇಳೆ ಯಾರದರೂ ಬಾಕಿ ಉಳಿದಿದ್ದರೆ, ಅವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನೌಕಾಪಡೆಯ ಈಜುಗಾರರು ತೊಡಗಿದ್ದಾರೆ’ ಅವರು ಮಾಹಿತಿ ನೀಡಿದರು.

ಹಾನಿಗೊಳಗಾದ ಪಿ305 ಬಾರ್ಜ್ ಅನ್ನು ಕೂಡಐಎನ್‌ಎಸ್ ಮಕರ್ ಶನಿವಾರ ಪತ್ತೆ ಹಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.