ಜಮ್ಮು: ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನಕೇಂದ್ರಿತ ಉಗ್ರರು ಇದೇ ಮೊದಲ ಬಾರಿಗೆ ಡ್ರೋನ್ಗಳನ್ನು ಬಳಸಿದ್ದಾರೆ. ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಬೆಳಿಗ್ಗಿನ ಜಾವ 1.40ರ ಹೊತ್ತಿಗೆ ಎರಡು ಬಾಂಬ್ ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ದಾಳಿಗಳು ನಡೆದಿವೆ. ಇಬ್ಬರು ಯೋಧರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಭಾರಿ ಭದ್ರತೆಯ ತಾಂತ್ರಿಕ ಪ್ರದೇಶದ ಒಂದಸ್ತಿನ ಕಟ್ಟಡದ ಚಾವಣಿಯನ್ನು ಸೀಳಿ ಮೊದಲ ಬಾಂಬ್ ಒಳಗೆ ಬಿದ್ದಿದೆ. ಎರಡನೆಯ ಬಾಂಬ್ ಬಯಲು ಪ್ರದೇಶದಲ್ಲಿ ಬಿದ್ದಿದೆ. ಈ ಎರಡೂ ಕಡಿಮೆ ತೀವ್ರತೆಯ ಸ್ಫೋಟಕಗಳು. ವಾಯು ನೆಲೆಯು ನಗರದ ಹೊರ ವಲಯದ ಸತ್ವಾರಿ ಎಂಬಲ್ಲಿದೆ.

ಇದನ್ನೂ ಓದಿ:ಜಮ್ಮು–ಕಾಶ್ಮೀರ: ಮರಳಿ ಜನತಂತ್ರದತ್ತ ಹೆಜ್ಜೆ

ಭಾರತೀಯ ವಾಯುಪಡೆಯ ಕೇಂದ್ರದ ಮೇಲೆ ನಡೆದಿರುವುದು ಭಯೋತ್ಪಾದನಾ ದಾಳಿ ಎಂಬುದನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಖಚಿತಪಡಿಸಿದ್ಧಾರೆ. ದಾಳಿಯ ಹಿಂದಿನ ಹುನ್ನಾರವೇನು ಎಂಬುದನ್ನು ಬಯಲಿಗೆಳೆಯಲು ವಾಯುಪಡೆಯ ಅಧಿಕಾರಿಗಳಿಗೆ ಪೊಲೀಸ್ ಮತ್ತು ಇತರ ತನಿಖಾ ಸಂಸ್ಥೆಗಳು ನೆರವು ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ತಂಡವೂ ಸ್ಥಳಕ್ಕೆ ತಲುಪಿದೆ.

ಡ್ರೋನ್ಗಳು ಎಲ್ಲಿಂದ ಬಂದಿವೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಅದರ ಹಾರಾಟದ ಹಾದಿಯನ್ನು ಪತ್ತೆ ಮಾಡುವ ಪ್ರಯತ್ನಗಳು ಆರಂಭವಾಗಿವೆ.

14 ಕಿ.ಮೀ. ಮಾತ್ರ: ಎರಡು ಸ್ಫೋಟಕಗಳನ್ನು ಉದುರಿಸಿದ ಡ್ರೋನ್ಗಳು ಗಡಿಯಾಚೆಗೆ ಅಥವಾ ಬೇರೆ ಯಾವುದೋ ಸ್ಥಳಕ್ಕೆ ಕತ್ತಲಲ್ಲೇ ಹಿಂದಿರುಗಿವೆ ಎಂದು ಅಧಿಕಾರಿಗಳು ಹೇಳಿದ್ಧಾರೆ. ಜಮ್ಮು ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ಗಡಿಗೆ ಇರುವ ವಾಯು ಮಾರ್ಗದ ದೂರ 14 ಕಿ.ಮೀ.ಮಾತ್ರ.

ಇದನ್ನೂ ಓದಿ:ಜಮ್ಮು ವಾಯುನೆಲೆ ಮೇಲೆ ಬಾಂಬ್ ದಾಳಿ; ಹತ್ತಿರದಿಂದಲೇ ಹಾರಿದ್ದವೇ ಡ್ರೋನ್ಗಳು?

ತಪ್ಪಿದ ದೊಡ್ಡ ದುರಂತ?
ಲಷ್ಕರ್ ಎ ತಯಬಾ ಸಂಘಟನೆಗೆ ಸೇರಿದವನು ಎನ್ನಲಾದ ವ್ಯಕ್ತಿಯ ಬಂಧನದಿಂದ ದೊಡ್ಡ ದಾಳಿಯ ಅಪಾಯವೊಂದನ್ನು ತಪ್ಪಿಸಲಾಗಿದೆ. ಆ ವ್ಯಕ್ತಿಯಿಂದ ಆರು ಕಿಲೋ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.ಜನಸಂದಣಿಯ ಪ್ರದೇಶದಲ್ಲಿ ಸ್ಫೋಟಕ ಇರಿಸುವ ಹೊಣೆಯನ್ನು ಉಗ್ರಗಾಮಿ ಸಂಘಟನೆಯು ಈತನಿಗೆ ವಹಿಸಿತ್ತು ಎಂದು ಜಮ್ಮು–ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.

ಮಾತುಕತೆ ಬೆನ್ನಿಗೆ ಹುನ್ನಾರ?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು–ಕಾಶ್ಮೀರದ ಪಕ್ಷಗಳ ಮುಖಂಡರ ಜತೆಗೆ ಮಾತುಕತೆ ನಡೆಸಿದ ಮೂರನೇ ದಿನಕ್ಕೆ ಈ ದಾಳಿ ನಡೆದಿದೆ.

ಭಾರತ–ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಜಾರಿಯಲ್ಲಿದೆ. ಹಿಂಬಾಗಿಲ ಮಾತುಕತೆಯ ಕಾರಣದಿಂದಾಗಿ, ಕೆಲವು ತಿಂಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಇದನ್ನೂ ಓದಿ:ಜಮ್ಮು: ಶಂಕಿತ ಭಯೋತ್ಪಾದಕನ ಬಂಧನ, 5.5 ಕೆ.ಜಿ. ಸುಧಾರಿತ ಸ್ಫೋಟಕ ವಶ

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಡಾಖ್ ಭೇಟಿಯಲ್ಲಿದ್ದಾರೆ. ಲಡಾಖ್ನ ಭಾಗವಾಗಿರುವ ಕಾರ್ಗಿಲ್ನ ನಾಯಕರ ಜತೆಗೆ ಕೇಂದ್ರ ಗೃಹ ಸಚಿವಾಲಯವು ಮಾತುಕತೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿಯೇ ದಾಳಿ ನಡೆದಿದೆ. ಈ ಎಲ್ಲ ವಿದ್ಯಮಾನಗಳ ಕಾರಣಕ್ಕೆ ದಾಳಿ ನಡೆದಿದೆ ಎಂದು ಅಧಿಕೃತವಾದ ಹೇಳಿಕೆ ಯಾವುದೂ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.