ದಕ್ಷಿಣ ಭಾರತದ ರಸಭರಿತ ವಿಜಯನಗರದ ಮಾವಿನ ಹಣ್ಣಿನ ಬಗ್ಗೆ ಕೇಳದವರಿಲ್ಲ. ಎಲ್ಲರೂ ಈ ಹಣ್ಣನ್ನು ತಿನ್ನಬೇಕು ಎಂದು ಬಯಸುತ್ತಾರೆ. ಕಿಸಾನ್ ರೈಲಿನ ಸಹಾಯದಿಂದ ಉತ್ತರ ಭಾರತದ ಮಂದಿಯೂ ವಿಜಯನಗರದ ಮಾವಿನ ಹಣ್ಣಿನ ರುಚಿ ಸವಿಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾನುವಾರ 'ಮನ್ ಕಿ ಬಾತ್'ನಲ್ಲಿ ಮಾತನಾಡಿದ ಪಿಎಂ ಮೋದಿ, ಕಿಸಾನ್ ರೈಲಿನ ಮೂಲಕ ಮಾವಿನ ಹಣ್ಣುಗಳು ದಿಲ್ಲಿ ಮತ್ತು ಉತ್ತರ ಭಾರತದ ಜನರಿಗೆ ತಲುಪುತ್ತವೆ ಮತ್ತು ಮಾವು ಬೆಳೆಗಾರರಿಗೆ ಉತ್ತಮ ಆದಾಯವೂ ದೊರೆಯುತ್ತದೆ. ಕಿಸಾನ್ ರೈಲು ಈವರೆಗೆ 9 ಲಕ್ಷ ಟನ್ ಉತ್ಪನ್ನವನ್ನು ಸಾಗಿಸಿದೆ. ಬಹಳ ಕಡಿಮೆ ಖರ್ಚಿನಿಂದ ದೇಶದ ದೂರದೂರದ ಪ್ರದೇಶಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಕಳುಹಿಸಿಕೊಡಲು ರೈತರಿಗೆ ಸಾಧ್ಯವಾಗುತ್ತಿದೆ ಎಂದರು.

ರಾಷ್ಟ್ರದ ರೈತರು ಅನೇಕ ಕ್ಷೇತ್ರಗಳ ಹೊಸ ವ್ಯವಸ್ಥೆಗಳ ಪ್ರಯೋಜನಗಳನ್ನು ಪಡೆದು ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಅಗರ್ತಲಾದ ರೈತರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇವರು ಅತ್ಯುತ್ತಮ ಹಲಸಿನ ಬೆಳೆ ಬೆಳೆಯುತ್ತಾರೆ. ಈ ಭಾಗದ ಹಲಸಿಗೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚಿದೆ. ಈ ಬಾರಿ ಕಿಸಾನ್ ರೈಲಿನ ಸಹಾಯದಿಂದ ಹಲಸಿನ ಹಣ್ಣನ್ನು ಅಗರ್ತಲಾದಿಂದ ಗುವಾಹಟಿಯ ವರೆಗೆ ತಂದು, ಅಲ್ಲಿಂದ ಲಂಡನ್‌ಗೆ ರಫ್ತು ಮಾಡುತ್ತಿದ್ದಾರೆ ಎಂದು ಮೋದಿ ವಿವರಿಸಿದರು.

ಮಹಿಳೆಯರಿಂದಲೇ 'ಆಕ್ಸಿಜನ್ ಎಕ್ಸ್ಪ್ರೆಸ್' ನಿರ್ವಹಣೆ: ಪಿಎಂ ಮೋದಿ ಶ್ಲಾಘನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.