ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸೋಮವಾರ ಘೋಷಿಸಿದ್ದಾರೆ.

2016ರಲ್ಲಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ನಂದಿಗ್ರಾಮದಲ್ಲಿ ಈ ಕುರಿತು ಮಾತನಾಡಿರುವ ಮಮತಾ ಬ್ಯಾನರ್ಜಿ, ' ನಾನು ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಸಾಧ್ಯವಾದರೆ, ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕಡೆ ಸ್ಪರ್ಧೆ ಮಾಡುತ್ತೇನೆ,' ಎಂದು ಅವರು ತಿಳಿಸಿದ್ದಾರೆ.

'ನಾನು ಯಾವಾಗಲೂ ನಂದಿಗ್ರಾಮದಿಂದಲೇ ವಿಧಾನಸಭಾ ಚುನಾವಣೆ ಪ್ರಚಾರ ಪ್ರಾರಂಭಿಸುತ್ತೇನೆ. ಇದು ನನಗೆ ಅದೃಷ್ಟದ ಸ್ಥಳವಾಗಿದೆ. ಆದ್ದರಿಂದ ಈ ಬಾರಿ ನಾನು ವಿಧಾನಸಭಾ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಬೇಕೆಂದು ಬಯಸಿದ್ದೇನೆ. ಈ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಅವಕಾಶ ನೀಡಬೇಕಾಗಿ ನಾನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾದ ಸುಬ್ರತಾ ಬಕ್ಷಿ ಅವರಲ್ಲಿ ಕೋರುತ್ತೇನೆ,' ಎಂದು ಹೇಳಿದರು.

ವಿಶೇಷವೆಂದರೆ, ಇತ್ತೀಚೆಗಷ್ಟೇ ಪಕ್ಷ ತೊರೆದು ಬಿಜೆಪಿ ಸೇರಿದ, ಟಿಎಂಸಿಯ ಪ್ರಭಾವಿ ನಾಯಕರೂ ಆಗಿದ್ದ ಸುವೇಂದು ಅಧಿಕಾರಿ 2016ರಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆದ್ದಿದ್ದರು. ಈಗ ಅದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಮಮತಾ ಪ್ರಕಟಿಸಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರುವ ಮುನ್ಸೂಚನೆ ಸಿಕ್ಕಿದೆ.

2016ರ ಫಲಿತಾಂಶ
ನಂದಿಗ್ರಾಮ
- ಸುವೇಂದು ಅಧಿಕಾರ (ಟಿಎಂಸಿ) -134,623
- ಅಬ್ದುಲ್ ಕಬೀರ್ ಶೇಖ್ (ಸಿಪಿಐ)- 53,393
- ಭಜನ್ ಕುಮಾರ್ ದಾಸ್ (ಬಿಜೆಪಿ) - 10,713

ಭವಾನಿಪುರ
- ಮಮತಾ ಬ್ಯಾನರ್ಜಿ (ಟಿಎಂಸಿ)-65,520
- ದೀಪಾ ದಾಸ್‌ಮನ್ಶಿ (ಕಾಂಗ್ರೆಸ್)- 40,219
- ಚಂದ್ರ ಕುಮಾರ್ ಬೋಸ್ (ಬಿಜೆಪಿ)- 26,299

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.