ಚಂಡೀಗಡ: ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಸಂಚುಕೋರ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಅವರನ್ನು ಕ್ಯಾಲಿಪೋರ್ನಿಯಾದಲ್ಲಿ ಅಮೆರಿಕದ ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ ಎಂದು ತಿಳಿದುಬಂದಿದೆ.

ಆದರೆ, ಬ್ರಾರ್ ಅವರನ್ನು ವಿಚಾರಣೆಗೆ ಒಳಪಡಿಸಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಧು ಮೂಸೆವಾಲಾ ಎಂದು ಜನಪ್ರಿಯರಾಗಿದ್ದ ಶುಭದೀಪ್ ಸಿಂಗ್ ಸಿಧು ಅವರನ್ನು ಮೇ 29ರಂದು ಪಂಜಾಬ್ನ ಮಾನಸ ಜಿಲ್ಲೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯ ಬ್ರಾರ್, ಸಿಧು ಹತ್ಯೆಯ ಹೊಣೆ ಹೊತ್ತಿದ್ದರು. ವಿದೇಶದಲ್ಲಿ ತಲೆಮೆರೆಸಿಕೊಂಡವರ ವಿಚಾರಣೆ ಮತ್ತು ಬಂಧನಕ್ಕೆ ಅನುವು ಮಾಡಿಕೊಡುವ ರೆಡ್ ಕಾರ್ನರ್ ನೋಟಿಸ್ ಸಹ ನೀಡಲಾಗಿತ್ತು.

ಪಂಜಾಬ್ನ ಮುಕ್ತಸರ್ ಸಾಹಿಬ್ ಮೂಲದ ಸತಿಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್, 2017ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಕೆನಡಾಗೆ ತೆರಳಿದ್ದರು. ಬಳಿಕ, ಅಲ್ಲಿಂದಲೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನಲ್ಲಿ ಸಕ್ರಿಯರಾಗಿದ್ದಾರೆ.

ಕಳೆದ ತಿಂಗಳು ನಡೆದ ಡೇರಾ ಸಚ್ಚಾ ಸೌಧದ ಅನುಯಾಯಿಯ ಹತ್ಯೆ ಪ್ರಕರಣದಲ್ಲಿ ಬ್ರಾರ್ ಆರೋಪಿಯಾಗಿದ್ದಾರೆ.

ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಸಂಚುಕೋರ ಗೋಲ್ಡಿ ಬ್ರಾರ್ ಬಗ್ಗೆ ಮಾಹಿತಿ ನೀಡುವವರಿಗೆ ಕೇಂದ್ರ ಸರ್ಕಾರವು ₹ 2 ಕೋಟಿ ಬಹುಮಾನ ಘೋಷಿಸಬೇಕು ಎಂದು ಸಿಧು ಅವರ ತಂದೆ ಬಲ್ ಕೌರ್ಸಿಂಗ್ ಗುರುವಾರ ಆಗ್ರಹಿಸಿದ್ದರು.

‘ಈ ಮೊತ್ತವನ್ನು ಸರ್ಕಾರಕ್ಕೆ ನೀಡಲು ಸಾಧ್ಯವಾಗದಿದ್ದರೆ ನಾನೇ ಆ ಹಣವನ್ನು ನೀಡುತ್ತೇನೆ’ ಎಂದೂ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.