ನವದೆಹಲಿ: ಗಡಿ ಬಿಕ್ಕಟ್ಟು ಬಗೆಹರಿಸಲು ಭಾರತ ಮತ್ತು ಚೀನಾ ನಡುವೆ ಸೇನಾ ಹಂತದಲ್ಲಿ ಗುರುವಾರ ನಡೆದ 14ನೇ ಸುತ್ತಿನ ಚರ್ಚೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಈ ಬಗ್ಗೆ ಉಭಯ ದೇಶಗಳು ಹೇಳಿಕೆ ನೀಡಿವೆ.

ಪರಸ್ಪರ ಒಪ್ಪಿತ ನಿರ್ಣಯ ಕೈಗೊಳ್ಳಲು ಹಾಗೂ ಆದಷ್ಟು ಶೀಘ್ರ ಪರಿಹಾರವನ್ನು ಕಂಡುಕೊಳ್ಳಲು ನಿಕಟ ಬಾಂಧವ್ಯ ಹೊಂದಲು ಉಭಯ ದೇಶಗಳು ಸಮ್ಮತಿಸಿದವು ಎಂದು ಹೇಳಿಕೆ ತಿಳಿಸಿದೆ.

ಭಾರತ ಸೇನೆಯ ಚೀಫ್ ಜನರಲ್ ಎಂ.ಎಂ.ನರವಣೆ ಅವರು ಬುಧವಾರ, ಪೂರ್ವ ಲಡಾಖ್‌ನಲ್ಲಿ ನಿಯೋಜಿಸಿರುವ ಸೇನೆ ಹಿಂಪಡೆಯುವ ಬಗ್ಗೆ 14ನೇ ಸುತ್ತಿನ ಮಾತುಕತೆಯಲ್ಲಿ ಫಲ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಭಾರತ–ಚೀನಾ ನಡುವಣ ಸೇನಾ ಹಂತದ ಮಾತುಕತೆಯು ಚುಶುಲ್ –ಮೊಲ್ಡೊ ಗಡಿಯಲ್ಲಿ, ಚೀನಾಗೆ ಹೊಂದಿಕೊಂಡ ಭಾಗದಲ್ಲಿ ಮಾತುಕತೆ ನಡೆಯಿತು. ರಕ್ಷಣಾ ಇಲಾಖೆ, ವಿದೇಶಾಂಗ ವ್ಯವಹಾರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂದು ಜಂಟಿ ಹೇಳಿಕೆ ತಿಳಿಸಿದೆ.

ಉಭಯ ಬಣಗಳ ನಡುವೆ ಮುಕ್ತ ಮತ್ತು ಆಳವಾದ ಮಾತುಕತೆ ನಡೆಯಿತು. ದೇಶದ ನಾಯಕರು ನೀಡುವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಲು ಒಪ್ಪಲಾಯಿತು ಎಂದೂ ಹೇಳಿಕೆಯು ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.