ಕಾನ್ಪುರ: ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿ.24ರಂದು ಉದ್ಯಮಿಯ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಮುಂದಿನ ಕ್ರಮ ಕೈಗೊಳ್ಳಲು ಉದ್ಯಮಿಯನ್ನು ಕಾನ್ಪುರದಿಂದ ಅಹಮದಾಬಾದ್ಗೆ ಕರೆದೊಯ್ಯಲಿದ್ದಾರೆ ಎಂದು ತಿಳಿಸಿದ್ದಾರೆ.

ತೆರಿಗೆ ವಂಚನೆ ಆರೋಪದ ಮೇರೆಗೆ ಉದ್ಯಮಿ ಪಿಯೂಷ್ ಜೈನ್ ಅವರನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ ಎಂದು ಕಾನ್ಪುರದ ಜಂಟಿ ಆಯುಕ್ತ ಸುರೇಂದ್ರ ಕುಮಾರ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಜೈನ್ ಒಡೆತನದ ವಿವಿಧ ಕಡೆ ಸರಣಿ ದಾಳಿ ನಡೆಸಿದ ಅಧಿಕಾರಿಗಳು ನಗದು ಸೇರಿದಂತೆ ₹ 257 ಕೋಟಿ ಮೌಲ್ಯಕ್ಕೂ ಅಧಿಕ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ನಗದು ₹ 150 ಕೋಟಿಗೂ ಅಧಿಕ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

ಇದನ್ನೂ ಓದಿ:ನೋಟುಗಳ ರಾಶಿ: ಐಟಿ ದಾಳಿಯಾದ ಕಾನ್ಪುರದ ಉದ್ಯಮಿ ಮನೆಯಲ್ಲಿ ಲಕ್ಷ್ಮೀ ಕಟಾಕ್ಷ

ಸರಕು ಸಾಗಣೆದಾರರಿಂದ ನಕಲಿ ಇನ್ವಾಯ್ಸ್ ಮತ್ತು ಇ-ವೇ ಬಿಲ್ಗಳಿಲ್ಲದೆ ಸರಕುಗಳ ರವಾನೆಗೆ ಸಂಬಂಧಿಸಿದ ಹಣ ಇದಾಗಿದೆ ಎಂದು ಆರೋಪಿಸಲಾಗಿದೆ.

ಉದ್ಯಮಿ ಪಿಯೂಷ್ ಜೈನ್ ಅವರು, ಒಡೊಕೆಮ್ ಕೈಗಾರಿಕೆ ಹೊಂದಿದ್ದು, ಈ ಕಂಪನಿಯು ಸುಗಂಧ ದ್ರವ್ಯಕ್ಕೆ ಸಂಬಂಧಿಸಿದ ಉತ್ಪನ್ನವನ್ನು ಹಲವು ಕಂಪನಿಗಳಿಗೆ ಸರಬರಾಜು ಮಾಡುತ್ತದೆ. ಕಾನ್ಪುರ ಮಾತ್ರವಲ್ಲದೆ, ಉದ್ಯಮಿಗೆ ಸಂಬಂಧಿಸಿದ ಮುಂಬೈ, ಗುಜರಾತ್ನ ಸ್ಥಳಗಳ ಮೇಲೂ ಐಟಿ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.