ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಹಲವು ‘ಸಾಕ್ಷ್ಯ’ಗಳನ್ನು ಕೃತಕವಾಗಿ ಸೃಷ್ಟಿಸಿ ಆರೋಪಿಗಳಲ್ಲಿ ಒಬ್ಬರಾದ ರೋನಾ ವಿಲ್ಸನ್ ಅವರ ಲ್ಯಾಪ್ಟಾಪ್ಗೆ ಸೇರಿಸಲಾಗಿದೆ ಎಂದು ಅಮೆರಿಕದ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆ ಆರ್ಸೆನಲ್ ಕನ್ಸಲ್ಟಿಂಗ್ ಹೇಳಿದೆ. ಎಲ್ಗಾರ್ ಪರಿಷತ್–ಭೀಮಾ ಕೋರೆಗಾಂವ್ ಪ್ರಕರಣ ನಡೆದು ಮೂರು ವರ್ಷಗಳಾಗಿದೆ.

ಮೆಸ್ಸಾಚುಸೆಟ್ಸ್ನ ಆರ್ಸೆನಲ್ ಕನ್ಸಲ್ಟಿಂಗ್ ಸಂಸ್ಥೆಯನ್ನು ರೋನಾ ಅವರ ಪರವಾಗಿ ಸಂಪರ್ಕಿಸಿ, ಅವರ ಲ್ಯಾಪ್ಟಾಪ್ನಲ್ಲಿ ಸಿಕ್ಕಿದೆ ಎಂದು ಹೇಳಲಾದ ಪತ್ರಗಳ ಮೂಲ ಪತ್ತೆ ಮಾಡಲು ಕೋರಲಾಗಿತ್ತು. ದೆಹಲಿ ನಿವಾಸಿ ರೋನಾ ಅವರು ರಾಜಕೀಯ ಕೈದಿಗಳ ಬಿಡುಗಡೆ ಸಮಿತಿಯ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿದ್ದರು. ಈಗ ಅವರು ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಿ, ಚುನಾಯಿತ ಸರ್ಕಾರವನ್ನು ಬೀಳಿಸುವ ಸಂಚಿಗೆ ಸಂಬಂಧಿಸಿದ ಪತ್ರವು ರೋನಾ ಅವರ ಲ್ಯಾಪ್ಟಾಪ್ನಲ್ಲಿ ಸಿಕ್ಕಿದೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಈ ಪ್ರಕರಣವನ್ನು ಪುಣೆ ಪೊಲೀಸರು ಆರಂಭದಲ್ಲಿ ತನಿಖೆ ಮಾಡಿದ್ದರು. ಬಳಿಕ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಹಸ್ತಾಂತರಿಸಲಾಗಿತ್ತು.

ಆರ್ಸೆನಲ್ ತನಿಖೆ ನಡೆಸಿದ, ಸಾಕ್ಷ್ಯವನ್ನು ತಿರುಚಿದ ಅತ್ಯಂತ ಗಂಭೀರವಾದ ಪ್ರಕರಣ ಇದು ಎಂಬುದನ್ನು ಗಮನಿಸಬೇಕು. ಲ್ಯಾಪ್ಟಾಪ್ನೊಳಕ್ಕೆ ಮೊದಲ ಮತ್ತು ಕೊನೆಯ ಪತ್ರವನ್ನು ಸೇರಿಸುವುದರ ನಡುವೆ ಭಾರಿ ಸಮಯ ಕಳೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ನೀಡಲಾದ ಭಾರಿ ಪ್ರಮಾಣದ ದತ್ತಾಂಶಗಳ ಮೇಲೆ ನಮ್ಮ ತಂಡವು ನಿರಂತರವಾಗಿ ಕೆಲಸ ಮಾಡಿದೆ. ಡಿಜಿಟಲ್ ವಿಧಿ ವಿಜ್ಞಾನ ಪದ್ಧತಿಯ ಬಳಕೆಯಲ್ಲಿ ನಮ್ಮ ಈ ಕೆಲಸವು ಹೊಸ ಮಾನದಂಡವನ್ನೇ ಸೃಷ್ಟಿಸಿದೆ. ಇತರರು ವಿಫಲವಾದ ಕಡೆಯಲ್ಲಿಯೂ ನಾವು ಯಶಸ್ಸು ಪಡೆದಿದ್ದೇವೆ’ ಎಂದು ಆರ್ಸೆನಲ್ನ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ ಟ್ವೀಟ್ ಮಾಡಿದ್ದಾರೆ.

ಪ್ರಕರಣ ಏನು?

ದಲಿತರು ಮರಾಠಾ ಪೇಶ್ವೆಗಳ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ ದ್ವಿಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಭೀಮಾ ಕೋರೆಗಾಂವ್ನಲ್ಲಿ 2018ರ ಜನವರಿ 1ರಂದು ಹಿಂಸಾಚಾರ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಹಿಂಸಾಚಾರಕ್ಕೆ ನಕ್ಸಲರ ನಂಟು ಇದೆ ಎಂದು ಆರೋಪಿಸಿದ್ದರು. 2017ರ ಡಿಸೆಂಬರ್ 31ರಂದು ನಡೆದ ಸಭೆಗೆ ನಕ್ಸಲರೇ ಹಣಕಾಸು ನೆರವು ನೀಡಿದ್ದರು. ಈ ಸಭೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಗಿತ್ತು. ಅದು ಹಿಂಸೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಕವಿ ವರವರರಾವ್, ವಕೀಲೆ ಸುಧಾ ಭಾರದ್ವಾಜ್, ಸಾಮಾಜಿಕ ಕಾರ್ಯಕರ್ತರಾದ ವರ್ನನ್ ಗೊನ್ಸಾಲ್ವೆಸ್ ಮತ್ತು ರೋನಾ ವಿಲ್ಸನ್, ಮಾನವ ಹಕ್ಕು ಹೋರಾಟಗಾರರಾದ ಅರುಣ್ ಫೆರೇರಾ ಮತ್ತು ಗೌತಮ್ ನವಲ್ಖಾ ಅವರನ್ನು ಬಂಧಿಸಲಾಗಿದೆ.

ವರದಿಯ ಸಾರಾಂಶ

‘ಆರ್ಸೆನಲ್ ನಡೆಸಿದ ವಿಶ್ಲೇಷಣೆಯ ಪ್ರಕಾರ, ರೋನಾ ವಿಲ್ಸನ್ ಅವರ ಕಂಪ್ಯೂಟರ್ ಅನ್ನು ಅವರ ಬಂಧನಕ್ಕೆ 22 ತಿಂಗಳ ಹಿಂದೆ ಹ್ಯಾಕ್ ಮಾಡಲಾಗಿದೆ. ರೋನಾ ಅವರ ಚಟುವಟಿಕೆ ಮೇಲೆ ನಿಗಾ ಇರಿಸುವುದು ಮತ್ತು ಅವರ ಲ್ಯಾಪ್ಟಾಪ್ಗೆ ಪತ್ರವನ್ನು ಸೇರಿಸುವುದು ಹ್ಯಾಕ್ ಮಾಡಿದ ವ್ಯಕ್ತಿಯ ಉದ್ದೇಶವಾಗಿತ್ತು. ಇದಕ್ಕಾಗಿ ಅವರಿಗೆ ಸಮಯವೂ ಸೇರಿದಂತೆ ಇತರ ಸಂಪನ್ಮೂಲಗಳ ಬೆಂಬಲ ಸಿಕ್ಕಿದೆ’ ಎಂಬುದು ಆರ್ಸೆನಲ್ ಕನ್ಸಲ್ಟಿಂಗ್ನ ವರದಿಯ ಸಾರಾಂಶವಾಗಿದೆ.

10 ಪತ್ರಗಳು

ರೋನಾ ಅವರ ಲ್ಯಾಪ್ಟಾಪ್ ಅನ್ನು 2016ರ ಜೂನ್ 13ರಂದು ಮೊದಲ ಬಾರಿಗೆ ಹ್ಯಾಕ್ ಮಾಡಲಾಗಿತ್ತು. ವರವರರಾವ್ ಅವರ ಇ–ಮೇಲ್ ಖಾತೆಯನ್ನು ಬಳಸುತ್ತಿದ್ದ ವ್ಯಕ್ತಿ ಹಲವು ಇ–ಮೇಲ್ಗಳನ್ನು ರೋನಾ ಅವರಿಗೆ ಕಳುಹಿಸಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2018ರ ಏಪ್ರಿಲ್ 6ರಂದು ರೋನಾ ಅವರ ಲ್ಯಾಪ್ಟಾಪ್ಗೆ ಕೊನೆಯ ಪತ್ರವನ್ನು ಸೇರಿಸಲಾಗಿತ್ತು. ಅದೇ ವರ್ಷದ ಏಪ್ರಿಲ್ 17ರಂದು ಲ್ಯಾಪ್ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ರೋನಾ ಅವರ ಕಂಪ್ಯೂಟರ್ಗೆ 10 ಪತ್ರಗಳನ್ನು ಸೇರಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಕೂಡ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.