ನವದೆಹಲಿ: ನೂತನ ಸಂಸತ್ ಭವನ, ಪ್ರಧಾನಿ ನಿವಾಸವನ್ನು ನಿರ್ಮಿಸುವ ‘ಸೆಂಟ್ರಲ್ ವಿಸ್ತಾ’ ಯೋಜನೆಯನ್ನು ‘ಕ್ರಿಮಿನಲ್ ವೇಸ್ಟೇಜ್’ ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂಥ ಯೋಜನೆ ಬಿಟ್ಟು, ಜನರ ಜೀವ ಉಳಿಸುವ ಕಡೆ ಗಮನ ಹರಿಸಬೇಕು ಎಂದುಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಸೆಂಟ್ರಲ್ ವಿಸ್ತಾ ಯೋಜನೆ ಒಂದು ಕ್ರಿಮಿನಲ್ ವೇಸ್ಟೇಜ್. ಇಂಥ ಸಮಯದಲ್ಲಿ ಜನರ ಜೀವ ಮುಖ್ಯವಾಗಬೇಕೇ ಹೊರತು ಹೊಸ ನಿವಾಸ (ಸೆಂಟ್ರಲ್) ಬೇಕೆಂಬ ನಿಮ್ಮ ಹಟ ಮುಖ್ಯವಾಗಬಾರದು‘ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸೆಂಟ್ರಲ್ ವಿಸ್ತಾ ಯೋಜನೆಯಡಿ ತ್ರಿಕೋನಾಕಾರದ ಹೊಸ ಸಂಸತ್ತಿನ ಭವನ ನಿರ್ಮಾಣ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ವರೆಗಿನ ಮೂರು ಕಿ.ಮೀ ಉದ್ದದ ರಾಜಪತ್ ನವೀಕರಣ ಮತ್ತು ಪ್ರಧಾನಿ ಮತ್ತು ಉಪ ರಾಷ್ಟ್ರಪತಿಯವರ ನೂತನ ನಿವಾಸಗಳ ನಿರ್ಮಾಣ ಮಾಡಲಾಗುತ್ತಿದೆ.

ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ ಈ ಹಿಂದೆ ನಿಗದಿಪಡಿದ್ದ ₹11,794 ಕೋಟಿ ಅಂದಾಜು ವೆಚ್ಚವನ್ನು ಪರಿಷ್ಕರಿಸಿದೆ. ಪರಿಷ್ಕೃತ ಅಂದಾಜು ವೆಚ್ಚ ₹13,450 ಕೋಟಿ.

ಸೆಂಟ್ರಲ್ ವಿಸ್ತಾ ಯೋಜನೆಯನ್ನು ‘ಅಗತ್ಯ ವಸ್ತುಗಳ ಕಾಯ್ದೆ‘ಯಡಿ ತಂದು, ಲಾಕ್ಡೌನ್ ನಡುವೆಯೂ ಈ ಯೋಜನೆಯ ಕಾಮಗಾರಿ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.