ನೊಯ್ಡಾ: ಇಲ್ಲಿ ನಿರ್ಮಾಣಗೊಂಡಿರುವ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ಭಾನುವಾರ ಮಧ್ಯಾಹ್ನ ನೆಲಸಮಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

‘ಸುಮಾರು 100 ಮೀಟರ್ನಷ್ಟು ಎತ್ತರವಿರುವ ಈ ಕಟ್ಟಡಗಳನ್ನು ನೆಲಸಮ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮ ಕಾರ್ಯ ಆರಂಭವಾಗಲಿದೆ’ ಎಂದು ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ಹೇಳಿದ್ದಾರೆ.

‘ಕಟ್ಟಡಗಳನ್ನು ಕೆಡವಲು ಸುಮಾರು 3,700 ಕೆ.ಜಿ ಸ್ಫೋಟಕಗಳನ್ನು ಬಳಸಲಾಗುತ್ತದೆ. ಎಮರಾಲ್ಡ್ ಕೋರ್ಟ್ ಹಾಗೂ ಎಟಿಎಸ್ ವಿಲೇಜ್ ಸೊಸೈಟಿಯಲ್ಲಿ ನೆಲೆಸಿರುವ ಸುಮಾರು 5 ಸಾವಿರ ಮಂದಿ ಭಾನುವಾರ ಬೆಳಿಗ್ಗೆ 7 ಗಂಟೆಗೆ ಬೇರೆಡೆ ಸ್ಥಳಾಂತರಗೊಳ್ಳಲಿದ್ದಾರೆ. ವಿದೇಶದ ಮೂವರು ತಜ್ಞರು, ಒಬ್ಬರು ಪೊಲೀಸ್ ಅಧಿಕಾರಿ, ಕಟ್ಟಡ ನೆಲಸಮಗೊಳಿಸುವಲ್ಲಿ ಪರಿಣತಿ ಹೊಂದಿರುವ ಭಾರತದ ಚೇತನ್ ದತ್ತ ಸ್ಥಳದಲ್ಲಿರಲಿದ್ದಾರೆ’ ಎಂದು ಎಡಿಫೈಸ್ ಎಂಜಿನಿಯರಿಂಗ್ ಪ್ರಾಜೆಕ್ಟ್ನ ಮ್ಯಾನೇಜರ್ ಮಯೂರ್ ಮೆಹ್ತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.