ನವದೆಹಲಿ: ಕೇಂದ್ರ ಸರ್ಕಾರ ಡಿಜಿಟಲ್ ಮಾಧ್ಯಮಗಳಿಗಾಗಿ ಜಾರಿಗೆ ತಂದಿರುವ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಟ್ವಿಟರ್ಪಾಲಿಸಬೇಕು ಎಂದು ದೆಹಲಿ ಹೈಕೋರ್ಟ್ ಸೋಮವಾರ ತಿಳಿಸಿದೆ.

ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಈ ಸೂಚನೆ ನೀಡಿದ್ದಲ್ಲದೆ, 'ಟ್ವಿಟರ್ ನಿಯಮಗಳನ್ನು ಪಾಲಿಸುತ್ತಿಲ್ಲ'ಎಂದು ವಕೀಲ ಅಮಿತ್ ಆಚಾರ್ಯ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಟ್ವಿಟರ್‌ಗೆ ನೋಟಿಸ್ ಜಾರಿಗೊಳಿಸಿದರು.

ಇದಕ್ಕೂ ಮುನ್ನ ನ್ಯಾಯಾಲಯದ ಮುಂದೆ ಹಾಜರಾದ ಟ್ವಿಟರ್, 'ನಾವು ನಿಯಮಗಳನ್ನು ಪಾಲಿಸುತ್ತಿದ್ದೇವೆ ಮತ್ತು ಇದಕ್ಕೆ ಸಂಬಂಧಿಸಿಂತೆ ಕುಂದುಕೊರತೆ ಆಲಿಸಲು ಅಧಿಕಾರಿಯನ್ನು ನೇಮಿಸಿದ್ದೇವೆ, ಆದರೆ, ಕೇಂದ್ರ ಸರ್ಕಾರವು ತಮ್ಮ ಹೇಳಿಕೆಯನ್ನು ವಿವಾದವಾಗಿಸಿದೆ'ಎಂದು ತಿಳಿಸಿತ್ತು. ಆದರೆ ಸರ್ಕಾರದ ಪರ ವಕೀಲ ರಿಪುದಮನ್ ಸಿಂಗ್ ಭಾರದ್ವಾಜ್ ಅವರು ಈ ವಾದವನ್ನು ಅಲ್ಲಗಳೆದರು.

ಹೊಸ ಐಟಿ ನಿಯಮಗಳು ಫೆಬ್ರವರಿ 25 ರಿಂದ ಜಾರಿಗೆ ಬಂದಿವೆ. ಅವುಗಳನ್ನು ಅನುಸರಿಸಲು ಕೇಂದ್ರವು ಟ್ವಿಟರ್ ಸೇರಿದಂತೆ ಪ್ರತಿ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಮೂರು ತಿಂಗಳು ಕಾಲಾವಕಾಶ ನೀಡಿದೆ ಎಂದು ಆಚಾರ್ಯ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಇವನ್ನೂ ಓದಿ
*ಹೊಸ ಐಟಿ ನಿಯಮಗಳ ಅನುಸರಣೆಗೆ ವಿವರ ಹಂಚಿದ ಗೂಗಲ್, ಫೇಸ್‌ಬುಕ್, ವಾಟ್ಸ್ಆ್ಯಪ್
*ಸರ್ಕಾರದ ಜತೆ ಟ್ವಿಟರ್ ಜಟಾಪಟಿ; ನೆಲದ ಕಾನೂನು ಪಾಲಿಸಲು ಕೇಂದ್ರದ ಖಡಕ್ ಸೂಚನ
*ಟ್ವಿಟರ್ ವಿರುದ್ಧ ತಿರುಗಿ ಬೀಳಲು ನಾನಾ ಕಾರಣಗಳು
*ಸಂಪಾದಕೀಯ: ಟ್ವಿಟರ್ ಮೇಲೆ ಒತ್ತಡ ಹೇರಿಕೆ; ಸರ್ವಾಧಿಕಾರಿ ಧೋರಣೆ ಸಲ್ಲದು
*ಡಿಜಿಟಲ್ ಕಾಯ್ದೆಗಳನ್ನು ಪ್ರಶ್ನಿಸಿ ಕೇಂದ್ರದ ವಿರುದ್ಧ ವಾಟ್ಸ್ಆ್ಯಪ್ ದಾವೆ
*ಕಚೇರಿಗೆ ಪೊಲೀಸರ ಭೇಟಿ; ಭಾರತದ ಸಿಬ್ಬಂದಿ ಸುರಕ್ಷತೆಯ ಬಗ್ಗೆ ಟ್ವಿಟರ್ ಕಳವಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.