ನಂದಿಗ್ರಾಮ: ಇಲ್ಲಿನ ಜನರ ಉತ್ಸಾಹವನ್ನು ನೋಡಿದರೆ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಜಯಗಳಿಸಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನಂದಿಗ್ರಾಮ ಕ್ಷೇತ್ರದಲ್ಲಿ ಮಂಗಳವಾರ ರೋಡ್ ಶೋ ನಡೆಸಿ ಸುವೇಂದು ಅಧಿಕಾರಿ ಪರ ಮತಯಾಚಿಸಿದ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬದಲಾವಣೆ ತರಬೇಕೆಂದರೆ ಸುಲಭವಾದ ಮಾರ್ಗವೆಂದರೆ ನಂದಿಗ್ರಾಮದಲ್ಲಿ ಮಮತಾ ದೀದಿ ಸೋಲುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶಾ ಹೇಳಿದ್ದಾರೆ.

ಓದಿ:ಏನಿದು ಮ್ಯಾಚ್ ಫಿಕ್ಸಿಂಗ್?: ಕೇರಳದಲ್ಲಿ ಎಲ್ಡಿಎಫ್ ವಿರುದ್ಧ ಪ್ರಧಾನಿ ಮೋದಿ ಟೀಕೆ

‘ನಾನಿಲ್ಲಿಗೆ ತಲುಪಿದ ಕೂಡಲೇ ಸುದ್ದಿಯೊಂದನ್ನು ಕೇಳಿದೆ. ಅದೇನೆಂದರೆ, ಮಮತಾ ಅವರು ಇರುವ 5 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎಂಬುದು. ಮುಖ್ಯಮಂತ್ರಿ ಇರುವ ಪ್ರದೇಶದಲ್ಲಿಯೇ ಅತ್ಯಾಚಾರ ನಡೆದಿದೆ ಎಂದಾದರೆ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಹೇಗೆ ಸಾಧ್ಯ’ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.

ಬಿಜೆಪಿ ಕಾರ್ಯಕರ್ತನ ತಾಯಿಯ ಮೇಲೆ ಹಲ್ಲೆ ನಡೆಸಲಾಗಿತ್ತು. ಅವರು ನಿನ್ನೆ ಮೃತಪಟ್ಟಿದ್ದಾರೆ. ಮಮತಾ ದೀದಿ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿರೋಧಾಭಾಸವನ್ನು ಪಶ್ಚಿಮ ಬಂಗಾಳದ ಜನತೆ ಗಮನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಡೀ ಬಂಗಾಳವು ಒಳನುಸುಳುವಿಕೆಯನ್ನು ಬಯಸುತ್ತಿಲ್ಲ. ಬದಲಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನ ಬಯಸುತ್ತಿದೆ ಎಂದೂ ಗೃಹ ಸಚಿವರು ಹೇಳಿದ್ದಾರೆ.

ಓದಿ:'ರಾಹುಲ್ ಅವಿವಾಹಿತ, ಜಾಗರೂಕರಾಗಿರಿ...': ಕೇರಳದಲ್ಲಿ ವಿವಾದಕ್ಕೀಡಾದ ಹೇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.