ಬೆಂಗಳೂರು: ಅಶೋಕ ಟ್ರಸ್ಟ್ ಫಾರ್ ರೀಸರ್ಚ್ ಇನ್ ಇಕಾಲಜಿ ಆ್ಯಂಡ್ ಎನ್ವಿರಾನ್ಮೆಂಟ್ (ಎಟಿಆರ್ಇಇ) ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞರು, ಪೂರ್ವ ಹಿಮಾಲಯದಲ್ಲಿ ಪತ್ತೆ ಮಾಡಿರುವ ಅಪರೂಪದ ಇರುವೆಯೊಂದಕ್ಕೆ ಕೀಟತಜ್ಞ ಹಾಗೂ ಸಾಹಿತಿಪ್ರೊ.ಕೆ.ಎನ್.ಗಣೇಶಯ್ಯ ಅವರ ಹೆಸರಿಡಲಾಗಿದೆ.

ಕೀಟಶಾಸ್ತ್ರಜ್ಞರಾದ ಪ್ರಿಯದರ್ಶನನ್ ಧರ್ಮರಾಜನ್, ಅಶ್ವಜ್ ಪುನ್ನಥ್ ಸಹನಶ್ರೀ, ಅನಿರುದ್ಧ ಮರಾಠೆ ಹಾಗೂ ಶ್ರೀಲಂಕಾದ ಡಬ್ಲ್ಯು.ಎಸ್.ಉದಯಕಾಂತ್ ಅವರಿದ್ದ ಸಂಶೋಧನಾ ತಂಡವುಜಿನಸ್ ಪ್ಯಾರಸಿಸ್ಸಿಯಾ ಮತ್ತು ಸಿಸ್ಸಿಯಾ ಪ್ರಭೇದಕ್ಕೆ ಸೇರಿದ ಎರಡು ಅಪರೂಪದ ತಳಿಯ ಇರುವೆಗಳನ್ನು ಈಗಲ್ನೆಸ್ಟ್ ವನ್ಯಜೀವಿ ಅಭಯಾರಣ್ಯದಲ್ಲಿ ಪತ್ತೆ ಹಚ್ಚಿದೆ.

ಎಟಿಆರ್ಇಇ ಈ ವರ್ಷ ಬೆಳ್ಳಿ ಮಹೋತ್ಸವ ಆಚರಿಸುತ್ತಿದೆ. ಹೀಗಾಗಿ ಒಂದು ಇರುವೆಗೆಎಟಿಆರ್ಇಇ ಸ್ಥಾಪಕರಲ್ಲಿ ಒಬ್ಬರಾದ ಪರಿಸರ ವಿಜ್ಞಾನಿ ಹಾಗೂ ಚಿಂತಕರೂ ಆಗಿರುವ ಪ್ರೊ.ಕೆ.ಎನ್.ಗಣೇಶಯ್ಯ (ಪ್ಯಾರಸಿಸ್ಸಿಯಾ ಗಣೇಶಯ್ಯ) ಅವರ ಹೆಸರಿಡಲಾಗಿದೆ. ಮತ್ತೊಂದು ಇರುವೆಗೆ ಸಿಸ್ಸಿಯಾ ಇಂಡಿಕಾ ಎಂದು ನಾಮಕರಣ ಮಾಡಲಾಗಿದೆ.

‘ಪ್ಯಾರಸಿಸ್ಸಿಯಾ ಗಣೇಶಯ್ಯ ಹೆಸರಿನ ಸಣ್ಣ ಗಾತ್ರದ ಇರುವೆಯು ಹಳದಿ ಮಿಶ್ರಿತ ಕಂದು ಬಣ್ಣ ಹೊಂದಿದೆ. ಇದರ ಮೇಲ್ಮೈ ಮೈಕ್ರೊ ಪಂಕ್ಚರ್ಸ್ಗಳಿಂದ ಕೂಡಿದೆ. ಈ ಇರುವೆ ಕೊಳೆತ ದಿಂಬಿಗಳು ಹಾಗೂ ಕಲ್ಲುಗಳ ಅಡಿಯಲ್ಲಿ ಗೂಡು ನಿರ್ಮಿಸುತ್ತದೆ. ಇದನ್ನು ಸಮುದ್ರಮಟ್ಟದಿಂದ 1,400 ಮೀಟರ್ ಎತ್ತರದ ಪ್ರದೇಶದಲ್ಲಿ ಸಂಗ್ರಹಿಸಲಾಗಿದೆ. ಸಿಸ್ಸಿಯಾ ಇಂಡಿಕಾ ಇರುವೆಯು ಕೆಂಪುಮಿಶ್ರಿತ ಕಂದು ಬಣ್ಣ ಒಳಗೊಂಡಿದೆ. ಇದರ ಮೇಲ್ಮೈ ಚಿಕ್ಕ ಚಿಕ್ಕ ಪಂಕ್ಚರ್ಗಳಿಂದ ಕೂಡಿದೆ. ಇದು ಕುರುಡು ಇರುವೆ. ಇದನ್ನು ಸಮುದ್ರಮಟ್ಟದಿಂದ 1,200 ಮೀಟರ್ ಎತ್ತರದಲ್ಲಿ ಸಂಗ್ರಹಿಸಲಾಗಿದೆ’ ಎಂದು ಸಂಶೋಧನಾ ತಂಡದ ಸದಸ್ಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.