ಬೆಂಗಳೂರು: ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಸ್ವಪಕ್ಷಿಯರಿಂದಲೇ ಆಕ್ರೋಶಕ್ಕೆ ಒಳಗಾಗುತ್ತಿರುವುದು 'ಬೊಮ್ಮಾಯಿ ಮಾಡೆಲ್' ಆಡಳಿತ ಎಂದು ವ್ಯಂಗ್ಯವಾಡಿದೆ.

ಸೊಗಡು ಶಿವಣ್ಣ ಹೇಳಿಕೆಯನ್ನು ಒಳಗೊಂಡ ‘ಪ್ರಜಾವಾಣಿ’ ವರದಿಯನ್ನು ಕೆಪಿಸಿಸಿ ಟ್ವೀಟ್ ಮಾಡಿದೆ.

‘ಮಾಜಿ ಸಚಿವ ಸೊಗಡು ಶಿವಣ್ಣ ಅವರು ಈ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯ, ಶೇ 40 ಕಮಿಷನ್ ಭ್ರಷ್ಟಾಚಾರ, ಸ್ವಪಕ್ಷದ ಜನಪ್ರತಿನಿಧಿಗಳ ದುರಾಡಳಿತದ ಬಗ್ಗೆ ಆಡಿದ ಮಾತಿಗೆ ಬಿಜೆಪಿ ಸರ್ಕಾರ ಏನು ಹೇಳುತ್ತದೆ’ ಎಂದು ಪ್ರಶ್ನಿಸಿದೆ.

ರಾಜ್ಯದಲ್ಲಿ ಹಿಂದೂಗಳ ಹತ್ಯೆ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸೊಗಡು ಶಿವಣ್ಣ ಗುರುವಾರ ಆರೋಪಿಸಿದ್ದಾರೆ.

ಮುಸ್ಲಿಂ ಸಂಘಟನೆಗಳು ದೇಶದಲ್ಲಿ ಯುದ್ಧ ಸಾರಿವೆ. ಅಗೋಚರ ಯುದ್ಧ ಆರಂಭವಾಗಿದ್ದು, ದುಷ್ಟ ಶಕ್ತಿಗಳು ಕಾನೂನು ಕೈಗೆ ತೆಗೆದುಕೊಂಡಿವೆ. ಇಂತಹ ಆತಂಕ, ಭಯದ ವಾತಾವರಣ ಸೃಷ್ಟಿಯಾಗಿದ್ದರೂ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ ಎಂದು ನೇರ ವಾಗ್ದಾಳಿ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.