ಪರ್ತ್: 'ನನ್ನ ಹಿನ್ನೆಲೆಯು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಆತ್ಮವಿಸ್ವಾಸವನ್ನು ತುಂಬುತ್ತದೆ' ಎಂದು ಭಾರತೀಯ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಯಶಸ್ವಿ ಜೈಸ್ವಾಲ್, ದ್ವಿತೀಯ ಇನಿಂಗ್ಸ್ನಲ್ಲಿ ಅಮೋಘ ಶತಕ ಗಳಿಸಿದ್ದರು. ಆ ಮೂಲಕ ಟೀಮ್ ಇಂಡಿಯಾದ 295 ರನ್ ಅಂತರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

22ರ ಹರೆಯದ ಜೈಸ್ವಾಲ್, ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶತಕದ ಸಾಧನೆ ಮಾಡಿದ್ದರು.

ಬಾಲ್ಯದಲ್ಲಿ ಎದುರಾದ ಸಂಕಷ್ಟದ ದಿನಗಳಿಂದ ಸಂಪಾದಿಸಿದ ಅನುಭವವು ಎಲ್ಲ ರೀತಿಯ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನೆರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್ ಆಟಗಾರನಾಗುವ ಕನಸಿನೊಂದಿಗೆ 11ನೇ ಹರೆಯದಲ್ಲೇ ಉತ್ತರ ಪ್ರದೇಶದಿಂದ ಮುಂಬೈಯ ಆಜಾದ್ ಮೈದಾನಕ್ಕೆ ಹೊರಟಿದ್ದ ಜೈಸ್ವಾಲ್, ಮೈದಾನದ ಸಿಬ್ಬಂದಿಯೊಂದಿಗೆ ಟೆಂಟ್ಗಳಲ್ಲಿ ವಾಸಿಸಿದ್ದರು. ಅಲ್ಲದೆ ಆಹಾರಕ್ಕಾಗಿ ಹಣ ಗಳಿಸಲು ರಾತ್ರಿ ಪಾನಿಪುರಿ ಮಾರಾಟ ಮಾಡಿದ್ದರು.

'ನನ್ನಲ್ಲಿ ಹೋರಾಟದ ಕಿಚ್ಚು ಅಡಗಿದೆ. ಹೋರಾಟದ ಮನೋಭಾವ ಸದಾ ಮುಂದುವರಿಯಲಿದೆ. ಹೋರಾಟವನ್ನು ಗೆಲ್ಲಲು ಬಯಸುತ್ತೇನೆ. ಬಹುಶಃ ನನ್ನ ಹಿನ್ನೆಲೆಯು ಎಂತಹ ಪರಿಸ್ಥಿತಿಯಿಂದ ಹೊರಬರಬಲ್ಲೆ ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ' ಎಂದು ಹೇಳಿದ್ದಾರೆ.

'ನಾನು ಇಂದು ಏನೆಲ್ಲ ಸಾಧಿಸಿದ್ದೇನೋ ಅದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ನನಗೆ ಇಷ್ಟವಾದ ವೃತ್ತಿಯಲ್ಲಿದ್ದೇನೆ. ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದೇನೆ. ಜೀವನದಲ್ಲಿ ವಿಭಿನ್ನ ಸನ್ನಿವೇಶಗಳನ್ನು ಹೇಗೆ ನಿಭಾಸಬಹುದೆಂಬ ಆತ್ಮವಿಶ್ವಾಸವನ್ನು ತುಂಬುತ್ತದೆ' ಎಂದು ಹೇಳಿದ್ದಾರೆ.
.Perth Test: ಪರ್ತ್ ಮೈದಾನದಲ್ಲಿ 161 ರನ್ ಗಳಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್.Perth Test: ಜೈಸ್ವಾಲ್, ಕೊಹ್ಲಿ ಶತಕ; ಭಾರತ 487/6 ಡಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.