ಬೆಂಗಳೂರು: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಕಡತಗಳನ್ನು ಪರಿಶೀಲಿಸುತ್ತಿರುವ ಫೊಟೋಗೆ ಕಮೆಂಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ಫೋಟೋ ಶೂಟ್ ಚೆನ್ನಾಗಿದೆ ನರೇಂದ್ರ ಮೋದಿ ಅವರೇ, ಆದರೆ ಲೈಟಿಂಗ್ ಕಳಪೆಯಾಗಿದೆ!' ಎಂದು ಛೇಡಿಸಿದೆ.

'ಟಾರ್ಚ್ ಬೆಳಕು ಬಳಸುವ ಬದಲು ನಿಮ್ಮ ಹೊಚ್ಚ ಹೊಸ 8,500 ಕೋಟಿ ಬೆಲೆಯ ವಿಮಾನದಲ್ಲಿ ಫೋಟೋಶೂಟ್ಗಾಗಿಯೇ ಪ್ರತ್ಯೇಕ ಲೈಟಿಂಗ್ ವ್ಯವಸ್ಥೆ ಮಾಡಿಕೊಳ್ಳಿ!' ಎಂದು ಕಾಂಗ್ರೆಸ್ ಮೋದಿ ಅವರಿಗೆ ವ್ಯಂಗ್ಯದ ಸಲಹೆ ನೀಡಿದೆ.

'ಅಂದ ಹಾಗೆ ಮಾರಲು ದೇಶದ ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ?' ಎಂದು ಕಾಂಗ್ರೆಸ್ ಪ್ರಧಾನಿ ಅವರ ಕಾಲೆಳೆದು ಟ್ವೀಟ್ ಮಾಡಿದೆ.

ಇದೇ ಸಂದರ್ಭ ವಾಷಿಂಗ್ಟನ್ನಲ್ಲಿ ವಿಮಾನದಿಂದ ಮೆಟ್ಟಿಲುಗಳ ಮೂಲಕ ಇಳಿಯುವಾಗ ಛತ್ರಿ ಏರಿಸಿಕೊಂಡು ಬಂದಿದ್ದಕ್ಕೂ ಕಮೆಂಟ್ ಮಾಡಿರುವ ಕಾಂಗ್ರೆಸ್, 'ನಮ್ಮ ಪ್ರಧಾನಿಗೆ ವಿದೇಶಿಯರೆದುರು ನಗೆಪಾಟಲಿಗೆ ಈಡಾಗುವುದು ಅಭ್ಯಾಸವಾಗಿಬಿಟ್ಟಿದೆ' ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.