ಬೆಂಗಳೂರು: ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹5 ತಗ್ಗಿಸಿದೆ. ಇದರ ಬೆನ್ನಿಗೇ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ತಲಾ ₹7 ಕಡಿಮೆ ಮಾಡಲು ರಾಜ್ಯ ಸರ್ಕಾರವೂ ತೀರ್ಮಾನಿಸಿದೆ.

ಕೇಂದ್ರ ಸರ್ಕಾರವು ಬುಧವಾರ ಕೈಗೊಂಡಿರುವ ತೀರ್ಮಾನವು ತೈಲೋತ್ಪನ್ನಗಳ ಎಕ್ಸೈಸ್ ಸುಂಕದಲ್ಲಿ ಇದುವರೆಗೆ ಆಗಿರುವ ಅತಿದೊಡ್ಡ ಕಡಿತ. 2020ರ ಮಾರ್ಚ್–ಮೇ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಕ್ರಮವಾಗಿ ₹13 ಹಾಗೂ ₹ 16ರಷ್ಟು ಏರಿಸಲಾಗಿತ್ತು. ಈ ಏರಿಕೆಯ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹ 32.9ಕ್ಕೆ ಹಾಗೂ ಡೀಸೆಲ್ ಮೇಲಿನ ಕೇಂದ್ರದ ತೆರಿಗೆಗಳು ಲೀಟರಿಗೆ ₹ 31.8ಕ್ಕೆ ತಲುಪಿದ್ದವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳವಾದ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದವು. ಪೆಟ್ರೋಲ್ ಬೆಲೆಯು ದೇಶದ ಬಹುತೇಕ ಕಡೆಗಳಲ್ಲಿ ಲೀಟರಿಗೆ ₹ 100ರ ಗಡಿ ದಾಟಿತು. ಡೀಸೆಲ್ ಬೆಲೆ ಕೂಡ ಹಲವು ಕಡೆಗಳಲ್ಲಿ ₹ 100ಕ್ಕಿಂತ ಹೆಚ್ಚಾಯಿತು.

2020ರ ಮೇ 5ರ ನಂತರ ಎಕ್ಸೈಸ್ ಸುಂಕ ಹೆಚ್ಚು ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದರಿಂದ ಪೆಟ್ರೋಲ್ ಬೆಲೆಯು ಲೀಟರಿಗೆ ₹ 38.78, ಡೀಸೆಲ್ ಬೆಲೆಯು ₹ 29.03 ಹೆಚ್ಚಾಗಿತ್ತು. ಕೇಂದ್ರವು ಎಕ್ಸೈಸ್ ಸುಂಕವನ್ನು ತಗ್ಗಿಸಬೇಕು ಎಂದು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಪೆಟ್ರೋಲ್, ಡೀಸೆಲ್ ಬೇಡಿಕೆ ಅಂಕಿ–ಅಂಶದ ಪ್ರಕಾರ ಎಕ್ಸೈಸ್ ಸುಂಕ ಕಡಿಮೆ ಮಾಡುವುದರಿಂದಾಗಿ ಕೇಂದ್ರಕ್ಕೆ ಆಗುವ ಮಾಸಿಕ ವರಮಾನ ನಷ್ಟ ₹ 8,700 ಕೋಟಿ. ವಾರ್ಷಿಕವಾಗಿ ₹ 1 ಲಕ್ಷ ಕೋಟಿಗಿಂತ ಜಾಸ್ತಿ ವರಮಾನ ನಷ್ಟ ಆಗುತ್ತದೆ. ಹಾಲಿ ಹಣಕಾಸು ವರ್ಷದ ಇನ್ನುಳಿದ ಅವಧಿಯಲ್ಲಿ ಆಗುವ ವರಮಾನ ನಷ್ಟ ₹ 43,500 ಕೋಟಿ ಎಂದು ಮೂಲಗಳು ತಿಳಿಸಿವೆ.

ಲಾಕ್‌ಡೌನ್ ಸಂದರ್ಭದಲ್ಲಿಯೂ ದೇಶದ ರೈತರು ತಮ್ಮ ಶ್ರಮದ ಮೂಲಕ ಆರ್ಥಿಕ ಪ್ರಗತಿಯ ಗತಿಯನ್ನು ಕಾಪಾಡಿಕೊಂಡಿದ್ದರು. ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಿರುವುದು ಮುಂಬರುವ ಬಿತ್ತನೆ ಸಮಯದಲ್ಲಿ ಅವರಿಗೆ ಉತ್ತೇಜನ ನೀಡಲಿದೆ ಎಂದು ಕೇಂದ್ರವು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.