ಹುಬ್ಬಳ್ಳಿ:‘ರಾಹುಲ್ ಗಾಂಧಿ ಡ್ರಗ್ ವ್ಯಸನಿ ಮತ್ತು ಡ್ರಗ್ ಪೆಡ್ಲರ್ ಎಂದು ಕೆಲವು ಮಾಧ್ಯಗಳು ವರದಿ ಮಾಡಿವೆ. ಇಂಥವರು ಹೇಗೆ ರಾಷ್ಟ್ರ ಮುನ್ನಡೆಸಲುಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಂಗಳವಾರ ಪ್ರಶ್ನೆ ಮಾಡಿದ್ದಾರೆ.

ನಗರದ ಶ್ರೀನಿವಾಸ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ವಿಧಾನ ಪರಿಷತ್ ಚುನಾವಣೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

‘ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ ಇಬ್ಬರೂ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಅವರಲ್ಲಿರುವ ಒಂದು ಗುಂಪು ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷ ಆಗಬೇಕು ಎಂದರೆ, ಮತ್ತೊಂದು ಗುಂಪು ಸೋನಿಯಾ ಗಾಂಧಿ ಆಗಬೇಕು ಎನ್ನುತ್ತಿದೆ. ಸ್ವಾತಂತ್ರ್ಯಪೂರ್ವದ ಪಕ್ಷ ಇದೀಗ ವೈಚಾರಿಕವಾಗಿ, ಭೌತಿಕವಾಗಿ ದಿವಾಳಿಯಾಗಿದೆ’ ಎಂದು ನಳೀನ್ ಗೇಲಿ ಮಾಡಿದರು.

‘ರಾಹುಲ್ ಗಾಂಧಿ ಡ್ರಗ್ ವ್ಯಸನಿ ಮತ್ತು ಡ್ರಗ್ ಪೆಡ್ಲರ್ ಎಂದು ಕೆಲವು ಮಾಧ್ಯಗಳು ವರದಿ ಮಾಡಿವೆ. ಇಂಥವರು ಹೇಗೆ ರಾಷ್ಟ್ರ ಮುನ್ನಡೆಸಲುಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿಯೇ’:‘ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಎಸ್‌ಸಿಯಿಂದ ಗುಮಾಸ್ತನವರೆಗೂ ಕುಟುಂಬದವರನ್ನೇ ನೇಮಿಸಿದ್ದರು. ಜೀವನ ಪೂರ್ತಿ ಅಪ್ಪ, ಮಕ್ಕಳು ಕುಟುಂಬ ರಾಜಕಾರಣವನ್ನೇ ಮಾಡುತ್ತ ಬಂದಿದ್ದಾರೆ. ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಅದಕ್ಕಾಗಿಯೇ ಅವರು ಆರ್‌ಎಸ್‌ಎಸ್‌ಗೆ ಬಯ್ಯುತ್ತಿರುವುದು. ಆರ್‌ಎಸ್‌ಎಸ್ ಶಾಖೆಗೆ ಬರಲು ಈಗಾಗಲೇ ಅವರಿಗೆ ಕರೆ ನೀಡಿದ್ದೇನೆ. ಅಲ್ಲಿ ಏನೇನು ಕಲಿಸುತ್ತಾರೆ ಎಂದು ಅವರೇ ತಿಳಿಯಲಿ’ ಎಂದುನಳಿನ್ ಕುಮಾರ್ಕಟೀಲ್ ಹೇಳಿದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.