ಬೆಂಗಳೂರು: ಕಾಂಗ್ರೆಸ್ ಪ್ರತ್ಯೇಕತಾವಾದಿಗಳ ಪರವೋ, ದೇಶದ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

‘ದಿ ಕಾಶ್ಮೀರ್ ಫೈಲ್ಸ್’ಸಿನಿಮಾ ಪ್ರದರ್ಶನ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಈ ಸಿನಿಮಾವನ್ನು ಭಾರತದಲ್ಲಿ ಪ್ರದರ್ಶಿಸದೆ ಪಾಕಿಸ್ತಾನದಲ್ಲಿ ತೋರಿಸಬೇಕೇ?, ಪ್ರತಿಯೊಬ್ಬ ಭಾರತೀಯರು ನೋಡಲೇ ಬೇಕಾದ ಸಿನಿಮಾ ಇದು. ಕಾಂಗ್ರೆಸ್ ಈ ಸಿನಿಮಾಕ್ಕೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?, ಕಾಂಗ್ರೆಸ್ ಪ್ರತ್ಯೇಕತಾವಾದಿಗಳ ಪರವೋ, ದೇಶದ ಪರವೋ’ ಎಂದು ಬಿಜೆಪಿ ಪ್ರಶ್ನಿಸಿದೆ.

ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವ ಸಿದ್ದರಾಮಯ್ಯ ಅವರೇ, ಕಾಶ್ಮೀರ, ಕಾಶ್ಮೀರಿ ಪಂಡಿತರ ಹಕ್ಕು ಎಂಬುದು ಯಾವಾಗ ಪ್ರತಿಪಾದಿಸುತ್ತೀರಿ?, ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಣೆ ನಿರಾಕರಿಸಿರುವ ನೀವು, ಯಾರ ಪರವಾಗಿ ಫೈಲ್ ಬಿಲ್ಡ್ ಮಾಡುತ್ತಿದ್ದೀರಿ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಸಿದ್ದರಾಮಯ್ಯ ಅವರೇ,ನೀವು #TheKashmirFiles ಸಿನಿಮಾ ವೀಕ್ಷಣೆ ಮಾಡುವುದಿಲ್ಲ ಎಂದು ಹೇಳಿದ್ದೇಕೆ? ನೀವು ಪೋಷಿಸಿಕೊಂಡು ಬಂದ ಜಿಹಾದಿ ಪ್ರತಿಪಾದಕರು ಈ ದೇಶದಲ್ಲಿ ನಡೆಸಿದ ನರಮೇಧವನ್ನು ನೋಡಲು ಅಂಜಿಕೆಯೇ? ಅಥವಾ ಸತ್ಯದರ್ಶನ ಮಾಡಲಾಗದ ಪಲಾಯನವಾದವೋ ಎಂದು ಬಿಜೆಪಿ ಪ್ರಶ್ನಿಸಿದೆ.

ಓದಿ...LIVE | ಹಿಜಾಬ್ ನಿರ್ಬಂಧದ ಆದೇಶ ಎತ್ತಿಹಿಡಿದ ಹೈಕೋರ್ಟ್: ಹಲವೆಡೆ ನಿಷೇಧಾಜ್ಞೆ, ವಿಜಯೋತ್ಸವ–ಪ್ರತಿಭಟನೆಗೆ ನಿರ್ಬಂಧ

ಓದಿ... ಕೋಮು ಸೌಹಾರ್ದ, ಕಾನೂನು ಸುವ್ಯವಸ್ಥೆ ಈಗ ಸರ್ಕಾರದ ಹೊಣೆ: ಡಿಕೆಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.