ಪ್ರವಾಸ ಎಂದರೆ ಹಲವು ಸಾಹಸಗಳ ಫಲಿತಾಂಶ. ಇದಕ್ಕೆ ತಕ್ಕುದಾಗಿ ಪ್ರವಾಸಿಗರಸುತ್ತಾಟಕ್ಕೆ ಮಾರ್ಗದರ್ಶನ, ನೆರವು ನೀಡುತ್ತಿದೆ ‘ಇಂಟರ್ಪಿಡ್’ ಪ್ರವಾಸಿ ಸಂಸ್ಥೆ.

ಹಲವು ವಿಭಾಗಗಳಲ್ಲಿ ಪ್ರವಾಸದ ಅವಕಾಶಗಳು ಲಭ್ಯವಿದೆ. ಸೈಕ್ಲಿಂಗ್, ಆಹಾರ, ಧ್ರುವಪ್ರದೇಶಗಳು, ಸಮುದ್ರಯಾನ, ಕಾಲ್ನಡಿಗೆ ಮತ್ತು ಚಾರಣ ಸೇರಿದಂತೆ ಹಲವು ರೀತಿಯಲ್ಲಿ ಪ್ರವಾಸಿ ತಾಣಗಳನ್ನು ಅನ್ವೇಷಿಸಬಹುದು.

18–29 ವಿಭಾಗ: ಒಂದೇ ವಯೋಮಾನದವರ ಜತೆ ಪ್ರವಾಸಿ ಮಾಡಲು ಹೆಚ್ಚು ಆಸಕ್ತಿ ಇದೆಯೆ. ಹಾಗಾದರೆ ಇಲ್ಲೊಂದು ವಿಶೇಷ ಪ್ಯಾಕೇಜ್ ಇದೆ. ಇಲ್ಲಿ 18ರಿಂದ 29ರ ವಯೋಮಾನದವರಿಗಷ್ಟೆ ಅವಕಾಶ. ಇದಕ್ಕಾಗಿ ಕನಿಷ್ಠ ಒಂಬತ್ತು ತಿಂಗಳ ಮೊದಲು ಬುಕ್ ಮಾಡಬೇಕು. ಆಗ ಶೇ 10ರಷ್ಟು ದರ ಕಡಿತ ಸೌಲಭ್ಯ ದೊರಕುತ್ತದೆ.

ಸ್ಥಳೀಯರೇ ಮಾರ್ಗದರ್ಶಕರು: ಭೇಟಿ ನೀಡುವ ತಾಣದ ಸಮಗ್ರ ಚಿತ್ರಣ ದೊರಕುವುದು ಸ್ಥಳೀಯರಿಂದಲೇ. ಈ ನಿಟ್ಟಿನಲ್ಲಿ ಸಂಸ್ಥೆ, ಪ್ರವಾಸಿ ತಜ್ಞರಾದ ಸ್ಥಳೀಯರ ಸಹಯೋಗದೊಂದಿಗೆ ಪ್ರವಾಸಿಗರಿಗೆ ಶ್ರೀಮಂತ ಅನುಭವ ಕಟ್ಟಿಕೊಡುತ್ತದೆ.

‘ಅಮೆಜಾನ್ನ ‘ಜಂಗಲ್ ಲಾಡ್ಜ್’ಗಳಲ್ಲಿ ರಾತ್ರಿ ಕಳೆಯುವುದು ಸೇರಿದಂತೆ, ಪರಿಸರದ ನೈಜ ಅನುಭವ ಪಡೆಯಲು ಅವಕಾಶ ಮಾಡಿಕೊಡುವುದು ನಮ್ಮ ಆದ್ಯತೆ’ ಎನ್ನುತ್ತದೆ ಸಂಸ್ಥೆ.

ಸುಸ್ಥಿರ ಪರಿಸರಕ್ಕೆ ನೆರವು: ದಿ ಇಂಟರ್ಪಿಡ್ ಫೌಂಡೇಷನ್ ಎನ್ಜಿಒ ಮೂಲಕ ಪರಿಸರದಲ್ಲಿ ಇಂಗಾಲ ಪ್ರಮಾಣ ತಗ್ಗಿಸಲು ವಿಶ್ವದಾದ್ಯಂತ ನಡೆಯುವ ಯೋಜನೆಗಳಿಗೆ ಸಂಸ್ಥೆ ನೆರವು ನೀಡುತ್ತದೆ. ಈ ಮೂಲಕ ಸುಸ್ಥಿರ ಪ್ರವಾಸ ಪದ್ಧತಿ ಅನುಸರಿಸುತ್ತದೆ.

ಪ್ರವಾಸಿಗರ ಅನುಭವಗಳು ಒಳಗೊಂಡಂತೆ ಪ್ರವಾಸದ ಹಲವು ಒಳನೋಟಗಳನ್ನು ನೀಡುವ ಬ್ಲಾಗ್ ಸಹ ಇದೆ.

https://www.intrepidtravel.comಕ್ಲಿಕ್ ಮಾಡಿ ಬೇಕಾದ ಪ್ರವಾಸಿ ಪ್ಯಾಕೇಜ್ ಆಯ್ಕೆ ಮಾಡಿಕೊಳ್ಳಬಹುದು. ಜತೆಗೆ ಪ್ರವಾಸದ ವಿವಿಧ ಆಯಾಮಗಳ ಮಾಹಿತಿಯನ್ನೂ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.