ರೈಲಲ್ಲಿ ಸಂಚರಿಸುವಾಗ ಕಿಟಕಿಯಾಚೆ ಕಣ್ಣು ನೆಟ್ಟು ಕೂತರೆ ಸಾಕು. ಕ್ಷಣಕ್ಷಣಕ್ಕೂ ಬದಲಾಗುವ ಸರಣಿ ಚಿತ್ರಗಳು ಅನಾಯಾಸವಾಗಿ ದಕ್ಕುತ್ತವೆ. ಸುರಂಗ, ಬೆಟ್ಟ, ಕಾಡು, ಮರಳುಗಾಡಿನ ನಡುವೆ ಹಾದು ಹೋಗುವ ರೈಲುಗಳು ಗಮ್ಯ ತಲುಪಿಸುವುದಷ್ಟೇ ಅಲ್ಲ, ಸಾಗುವ ಹಾದಿಯ ಅನುಭವವನ್ನೂ ದಟ್ಟವಾಗಿ ಕಟ್ಟಿಕೊಡುತ್ತವೆ. ಈ ದಸರೆ ರಜೆಯಲ್ಲಿ ಒಬ್ಬಂಟಿಯಾದರೂ, ಗುಂಪಿನಲ್ಲಿದ್ದರೂ ರೈಲಿನಲ್ಲೊಂದು ಸುತ್ತಾಟ ಮಾಡಿ ಬನ್ನಿ. ನೆನಪಿನ ಚಿತ್ರಮಾಲಿಕೆಗೆ ಮತ್ತಷ್ಟು ಸುಂದರ ಪಟಗಳು ಸೇರ್ಪಡೆಯಾಗುವುದು ಖಂಡಿತ.

ಕಲ್ಕಾ-ಶಿಮ್ಲಾ (ಹಿಮಾಲಯನ್ ಕ್ವೀನ್ )

ಈ ಮಾರ್ಗದಲ್ಲಿ ಸಂಚರಿಸುವ ರೈಲು, ‘ಟಾಯ್ ಟ್ರೈನ್’ ಅನ್ನು ಹೋಲುತ್ತದೆ. 1903ರಲ್ಲಿ ಆರಂಭವಾದ 96 ಕಿ.ಮೀ. ಉದ್ದದ ಈ ಮಾರ್ಗ 102 ಸುರಂಗ, 82 ಸೇತುವೆಗಳನ್ನು ಹಾದುಹೋಗುತ್ತದೆ. ಪೈನ್, ಓಕ್, ದೇವದಾರು ಮರಗಳ ದಟ್ಟ ಕಾಡು ಕಣ್ಣಿಗೆ ತಂಪೆರೆಯುತ್ತದೆ. ಕಡಿದಾದ ಏರುಹಾದಿಯಲ್ಲಿ ಸಾಗುವ ಈ ಮಾರ್ಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದೆ. 2008ರಿಂದ ಯುನೆಸ್ಕೊ ವಿಶ್ವಪಾರಂಪರಿಕ ತಾಣವಾಗಿಯೂ ಜನಪ್ರಿಯವಾಗಿದೆ.

ಮುಂಬೈ-ಗೋವಾ

ಒಂದು ಕಡೆ ಸಹ್ಯಾದ್ರಿ ಬೆಟ್ಟಸಾಲು ಮತ್ತೊಂದು ಕಡೆ ಅರಬ್ಬಿ ಸಮುದ್ರ, ಇದರ ನಡುವೆ ಸಾಗುವ ಈ ರೈಲು 92 ಸುರಂಗಗಳು, 2000 ಸೇತುವೆಗಳನ್ನು ಹಾದುಹೋಗುತ್ತದೆ.

ಕನ್ಯಾಕುಮಾರಿ-ತಿರುವನಂತಪುರ

ದಕ್ಷಿಣ ಭಾರತದ ಅತ್ಯಂತ ರಮಣೀಯ ತಾಣಗಳಿಗೆ ಸಂಪರ್ಕ ಕಲ್ಪಿಸುವ ಈ ರೈಲು ಯಾನದಲ್ಲಿ, ಕೇರಳ ಹಾಗೂ ತಮಿಳುನಾಡಿನ ವಿಶಿಷ್ಟ ವಾಸ್ತುಶೈಲಿಯ ದೇಗುಲ, ಚರ್ಚ್‌ಗಳನ್ನು ಕಾಣಬಹುದು.

ಸಿಲಿಗುರಿ-ನಿವ್ ಮಾಲ್-ಹಾಸಿಮಾರಾ-ಅಲಿಪುರದೌರ್

ಮಹಾನಂದ ಅಭಯಾರಣ್ಯ, ಚಾಪ್ರಮಾರಿ ಅರಣ್ಯ, ಜಲದಾಪಾಡಾ ಅಭಯಾರಣ್ಯ, ಬುಕ್ಸಾ ಹುಲಿ ಸಂರಕ್ಷಿತ ತಾಣ ಹಾಗೂ ಹಲವಾರು ನದಿಗಳನ್ನು ಹಾದುಹೋಗುತ್ತದೆ.

ಜೋಧ್‌ಪುರ-ಜೈಸಲ್ಮೇರ್ (ಡೆಸರ್ಟ್ ಕ್ವೀನ್ )

ಐಷಾರಾಮಿ ಸೌಲಭ್ಯವುಳ್ಳ ವಿಶೇಷ ರೈಲು ಇದು. ಮರುಭೂಮಿ ಎಂದರೆ ಕೇವಲ ಬರಡು ಎನ್ನುವ ಭಾವನೆ ಹೋಗಲಾಡಿಸುತ್ತದೆ ಈ ಮಾರ್ಗದ ರೈಲು ಪ್ರಯಾಣ. ಈ ಯಾನದಿಂದ, ಹಸಿರಿನಷ್ಟೇ ಮರಳುಗಾಡು ಸಹ ಉಲ್ಲಾಸ ತರಬಲ್ಲದು ಎನ್ನುವ ಅನುಭವವೂ ದಕ್ಕುತ್ತದೆ. ಮರಳುಗಾಡಿನ ಯಾನದಲ್ಲಿ ಅಲ್ಲಲ್ಲಿ ಅಲೆಯುತ್ತಿರುವ ಒಂಟೆಗಳ ಗುಂಪು ಕಾಣಸಿಗುತ್ತವೆ. ಮರಳುಗಾಡಿನ ನಡುವಿನ ಸೂರ್ಯೋದಯ ಹೊಸದೇ ನೋಟ ನೀಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.