ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿಭಾರತೀಯ ರಕ್ಷಣಾ ವ್ಯವಸ್ಥೆಯ ಸಮಗ್ರ ನೋಟವನ್ನು ಕಟ್ಟಿಕೊಡಲು ಲಾಲ್ಬಾಗ್ನ ಗಾಜಿನ ಮನೆ ಮತ್ತು ಸುತ್ತಲಿನ ಪ್ರದೇಶಗಳನ್ನು ಅಣಿಗೊಳಿಸಲಾಗುತ್ತಿದೆ. ಭೂಸೇನೆ, ನೌಕಾ ಮತ್ತು ವಾಯುಪಡೆಯಲ್ಲಿ ಆರಂಭದಿಂದ ಇಂದಿನವರೆಗೆ ನಡೆದಿರುವ ಸಂಶೋಧನೆ, ಆವಿಷ್ಕಾರ ಮತ್ತು ಯುದ್ಧ ಸಾಮಗ್ರಿಗಳ ಬಳಕೆಯ ಬಗ್ಗೆ ಕೂಲಂಕುಶ ಮಾಹಿತಿ ಪಡೆದು ಇಷ್ಟವಾದ ಯುದ್ಧ ಪರಿಕರದ ಅಥವಾ ಯುದ್ಧ ವಿಮಾನಗಳ ಮಾದರಿಯನ್ನು ಖರೀದಿಸುವ ಅವಕಾಶವೂ ಸಿಗಲಿರುವುದು ಈ ಬಾರಿಯ ವಿಶೇಷ.

‘ಪ್ರತಿವರ್ಷ ವಿಭಿನ್ನ ಪರಿಕಲ್ಪನೆಯನ್ನು ಫಲಪುಷ್ಪ ವಿನ್ಯಾಸದೊಂದಿಗೆ ವೀಕ್ಷಕರಿಗೆ ಮನರಂಜನೆ ಮತ್ತು ಮಾಹಿತಿ ನೀಡುತ್ತಾ ಬಂದಿದ್ದೇವೆ. ಈ ಬಾರಿಯ ಪ್ರದರ್ಶನವು ಮನರಂಜನೆ, ಮಾಹಿತಿ ಮತ್ತು ಮಾರಾಟ ಎಂಬ ಆಯಾಮದಲ್ಲಿ ವಿಸ್ತರಣೆಗೊಳ್ಳಲಿದೆ.ಭಾರತೀಯ ಸೇನೆಗೆಪುಷ್ಪ ನಮನ’ ಎಂಬ ನಮ್ಮ ಈ ಬಾರಿಯ ಪರಿಕಲ್ಪನೆ ಜನಸಾಮಾನ್ಯರೂ ನಮ್ಮ ಸೇನೆಯ ಮೂರೂ ವಿಭಾಗಗಳನ್ನು ಸಮಗ್ರವಾಗಿ ಅರಿತುಕೊಳ್ಳಲು ಸಹಕಾರಿಯಾಗಲಿದೆ’ ಎಂಬುದು,ತೋಟಗಾರಿಕಾ ಇಲಾಖೆ (ಲಾಲ್ಬಾಗ್) ಜಂಟಿ ನಿರ್ದೇಶಕ ಎಂ.ಜಗದೀಶ್ ಅವರ ವಿಶ್ವಾಸ.

ಹೀಗಿರುತ್ತದೆ ನೋಡಿ...
ಸಿಯಾಚಿನ್ನಂತಹ ಹಿಮಾವೃತ ಪ್ರದೇಶದಲ್ಲಿ ನಮ್ಮ ಯೋಧರು ಹೇಗೆ ಕಾರ್ಯನಿರ್ವಹಿಸುತ್ತಾರೆ, ನಮ್ಮದೇ ಹೆಮ್ಮೆಯ ಸಂಸ್ಥೆ ಎಚ್ಎಎಲ್ ಸೇನೆಗೆ ತಯಾರಿಸಿಕೊಟ್ಟ ಯುದ್ಧ ವಿಮಾನಗಳು ಮತ್ತು ಪರಿಕಗಳು ಯಾವುವು, ಡಿಆರ್ಡಿಒನಲ್ಲಿ ನಡೆದ ಸಂಶೋಧನೆಗಳು ಮತ್ತು ಅಭಿವೃದ್ಧಿಗೊಂಡ ಯುದ್ಧ ಸಾಮಗ್ರಿಗಳೇನು, ಬಿಎಸ್ಎಫ್ ಯೋಧರು ಮತ್ತು ಅಧಿಕಾರಿಗಳ ಸರ್ವೇತಿಹಾಸ... ಹೀಗೆ ರಕ್ಷಣಾ ಇಲಾಖೆಯ ಪೂರ್ವಾಪರ ಮತ್ತು ವರ್ತಮಾನಗಳನ್ನು ಸಚಿತ್ರವಾಗಿ ಕಣ್ತುಂಬಿಕೊಳ್ಳಲು ಇದು ಸುವರ್ಣಾವಕಾಶವಾಗಲಿದೆ.

ಗಾಜಿನ ಮನೆಯ ಮಧ್ಯಭಾಗದ 90/40 ಅಡಿ ವಿಸ್ತೀರ್ಣದಲ್ಲಿ ಈ ಚಿತ್ರಣಗಳು ಬರಲಿವೆ. ಭಾರತದ ಭೌಗೋಳಿಕ ವೈಶಿಷ್ಟ್ಯ ಮತ್ತು ಅಲ್ಲಿರುವ ರಕ್ಷಣಾ ವ್ಯವಸ್ಥೆಯ ಕಾರ್ಯಾಚರಣೆಯನ್ನು ಬಿಂಬಿಸುವಂತೆ ಗಾಜಿನ ಮನೆಯ ಒಳಭಾಗವನ್ನು ವಿನ್ಯಾಸ ಮಾಡಲಾಗುವುದು. ಅಂದರೆದಕ್ಷಿಣದ ಸಮುದ್ರಭಾಗ, ಮೈದಾನ ಪ್ರದೇಶ, ಮರುಭೂಮಿ ಮತ್ತು ಹಿಮಾಲಯ ಹಾಗೂ ಸಿಯಾಚಿನ್ ಪ್ರದೇಶ ಹೂಗಳಲ್ಲಿ ಅರಳಲಿದೆ.

ಸಮುದ್ರದ ಭಾಗದಲ್ಲಿ ನೌಕಾ ನೆಲೆಯ ಮಾದರಿ, ರಾಜಸ್ಥಾನದಿಂದ ಹಿಮಾಲಯದವರೆಗೆ ಕಾರ್ಯ ನಿರ್ವಹಿಸುತ್ತಿರುವ ಗಡಿ ರಕ್ಷಣಾ ಪಡೆ (ಬಿಎಸ್ಎಫ್), ಯುದ್ಧನೆಲೆ,ವಾಯು ಪಡೆಯ ಚಿತ್ರಣ, ಹಿಮಾಲಯ ಮತ್ತು ಸಿಯಾಚಿನ್ನಲ್ಲಿ ನಮ್ಮ ಸೇನೆಯ ಕಾರ್ಯಾಚರಣೆ, ಸಿಯಾಚಿನ್ನಲ್ಲಿಯೇ ಹೆಲಿಪ್ಯಾಡ್ ಮೇಲೆ ನಿಂತಿರುವ ನೌಕಾ ಹೆಲಿಕಾಪ್ಟರ್ ಮಾದರಿ ಇರಲಿದೆ. ಇವುಗಳನ್ನು ಹೂವು, ಹಣ್ಣು ಮತ್ತು ಇತರ ಅಗತ್ಯ ಸಾಮಗ್ರಿಗಳ ನೆರವಿನಿಂದ ಕುಶಲಕರ್ಮಿಗಳುನಿರ್ಮಿಸಲಿದ್ದಾರೆ.

ಇವಿಷ್ಟೇ ಅಲ್ಲದೆ, ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸಣ್ಣಪುಟ್ಟ ಮಾಹಿತಿಯನ್ನೂ ಸಚಿತ್ರವಾಗಿ,ಗಾಜಿನ ಮನೆಯ ಸುತ್ತಮುತ್ತ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶಿಸಲಾಗುವುದು.

‘ಇಂಡಿಯಾ ಗೇಟ್’ ಬಳಿ ಉದ್ಘಾಟನೆ
ಇದೇನು ಹೊಸದಿಲ್ಲಿಯ ರಾಜಪಥ್ನಲ್ಲಿರುವ ಯುದ್ಧ ಸ್ಮಾರಕ ‘ಇಂಡಿಯಾ ಗೇಟ್’ ಬಳಿ ಲಾಲ್ಬಾಗ್ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದೆಯೇ ಎಂದು ಬೆರಗಾಗಬೇಡಿ. ಇಂಡಿಯಾ ಗೇಟ್ಗೆ ಭೇಟಿಯಿತ್ತವರು ಅಲ್ಲಿಯೇ ಸಮೀಪದಲ್ಲಿರುವ ಅಮರಜ್ಯೋತಿಯನ್ನೂ ಕಂಡಿರಬಹುದು. ಅದೇ ಅಮರಜ್ಯೋತಿಯ ಮಾದರಿ ನಮ್ಮ ಗಾಜಿನಮನೆಯ ಪ್ರವೇಶದ್ವಾರದಲ್ಲಿ ನಿರ್ಮಾಣಗೊಳ್ಳಲಿದೆ. ಈ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು.

ಇಂಡೊ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಎಂಬ ಸಂಘದವರು 30ಸಾವಿರದಿಂದ 40ಸಾವಿರ ಹೂಕುಂಡಗಳಲ್ಲಿಪುಷ್ಪ ಪ್ರದರ್ಶನ ಮಾಡಲಿದ್ದಾರೆ. ಇದೂ ಈ ಬಾರಿಯ ವೈಶಿಷ್ಟ್ಯವೆನಿಸಲಿದೆ.20 ಜಾತಿಯ ಹೂಗಳು ಮತ್ತು 10 ಬಗೆಯ ಎಲೆಯ ಜಾತಿಯ ಗಿಡಗಳು ಈ ವಿನ್ಯಾಸಗಳಿಗೆ ಬಳಕೆಯಾಗಲಿದೆ.

ಒಟ್ಟಿನಲ್ಲಿ, ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಸಹಯೋಗದಲ್ಲಿ ನಡೆಯುವಈ ಬಾರಿಯ 72ನೇ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಅಭೂತಪೂರ್ವವಾಗಿ ವಿನ್ಯಾಸಗೊಳ್ಳಲಿದೆ.

ಮಕ್ಕಳಿಗಂತೂ ನಮ್ಮ ಯೋಧರು ಮತ್ತು ಅವರ ವಾಹನ ಯಾವತ್ತೂ ಕುತೂಹಲದ ಸಂಗತಿಗಳು.ಅವರಿಗೆ ಕೈಬೀಸಿ ಹೆಮ್ಮೆಯಿಂದ ಎದೆಯುಬ್ಬಿಸಿ ಸೈನಿಕರ ಶೈಲಿಯಲ್ಲಿ ಸೆಲ್ಯೂಟ್ ಮಾಡಿ ಸಂಭ್ರಮಿಸುತ್ತಾರೆ. ಸೇನೆ, ಯೋಧರು ಮತ್ತು ಯುದ್ಧ ವಿಮಾನಗಳ ಬಗೆಗೆ ಮಕ್ಕಳಲ್ಲಿರುವ ಕುತೂಹಲವನ್ನು ತಣಿಸಿ ಅವರಲ್ಲಿ ನಮ್ಮ ರಕ್ಷಣಾ ವ್ಯವಸ್ಥೆಯ ಬಗ್ಗೆ ಜ್ಞಾನ ತುಂಬಲು ಇದೊಳ್ಳೆ ಅವಕಾಶ. ಹಾಗಿದ್ದರೆ ಮಿಸ್ ಮಾಡ್ಕೋಬೇಡಿ. ಮಕ್ಕಳೊಂದಿಗೆ ಪುಷ್ಪ ಪ್ರದರ್ಶನಕ್ಕೆ ಹೋಗಿಬರಲು ಸಜ್ಜಾಗಿ.

ಮುಖ್ಯ ಆಕರ್ಷಣೆಗಳು
ಬಿಎಚ್ಇಎಲ್, ಬಿಎಸ್ಎಫ್ ಯಲಹಂಕ, ಮೇಖ್ರಿ ವೃತ್ತದ ಬಳಿಯಿರುವ ಇಂಡಿಯನ್ ಏರ್ಫೋರ್ಸ್ ಕಮಾಂಡೆಂಟ್, ಹಲಸೂರಿನಲ್ಲಿರುವ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್,ಡಿಆರ್ಡಿಒ ಸೇರಿದಂತೆ ಇನ್ನೂ ಕೆಲವು, ಯುದ್ಧ ಸಾಮಗ್ರಿ ಮತ್ತು ಯುದ್ಧ ವಿಮಾನಗಳ ತಯಾರಿಯಲ್ಲಿ ತೊಡಗಿರುವ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಅವುಗಳು ಸಂಶೋಧಿಸಿದ, ಆವಿಷ್ಕರಿಸಿದ, ವಿನ್ಯಾಸಗೊಳಿಸಿದ ಮತ್ತು ಉತ್ಪಾದಿಸಿದ ಸಾಮಗ್ರಿಗಳ ಮಾದರಿ ಪ್ರದರ್ಶನ ಇರಲಿದೆ.

ಎಚ್ಎಎಲ್ಗಳು ಇದುವರೆಗೆ ನಿರ್ಮಿಸಿರುವ ಯುದ್ಧ ವಿಮಾನಗಳ ಮಾದರಿಗಳನ್ನು ಖರೀದಿಸುವ ಅವಕಾಶ ಈ ಬಾರಿ ಸಿಗಲಿದೆ.ಬಿಇಎಲ್ ಮತ್ತು ವಾಯುಪಡೆಯ ಮಾದರಿಗಳು, ಮಾಹಿತಿಗಳನ್ನು ಪ್ರದರ್ಶನದಲ್ಲಿ ನೋಡಬಹುದು.

ಚಿತ್ರರಂಗದ ಮೈಲಿಗಲ್ಲುಗಳಿಗೆ ಹೂ ಚಿತ್ತಾರ
85 ವರ್ಷ ತುಂಬಿರುವ ಕನ್ನಡ ಚಿತ್ರರಂಗಕ್ಕೆಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಗೌರವ ಸಮರ್ಪಣೆಯಾಗಲಿದೆ.

ಬೃಹತ್ ಗಾತ್ರದ ಕ್ಯಾಮೆರಾ, ಫಿಲ್ಮ್ಗಳು ಹಾಗೂ ಚಿತ್ರ ನಿರ್ಮಾಣಕ್ಕೆ ಕಪ್ಪುಬಿಳುಪು ಕಾಲದಿಂದೀಚೆ ಬಳಕೆಯಾದ ವಿವಿಧ ಉಪಕರಣಗಳನ್ನೂ ಹೂವಿನಲ್ಲೇ ನಿರ್ಮಿಸಲಾಗುವುದು. ಇದರೊಂದಿಗೆ ಸುಮಾರು 5,000 ಹೂವುಗಳ ವಿಶೇಷ ಪ್ರದರ್ಶನವೂ ಇರುತ್ತದೆ.

ಈ ಬಾರಿಯ ಪುಷ್ಪ ಪ್ರದರ್ಶನದಲ್ಲಿ ಬಹಳ ವಿಶಿಷ್ಟವಾಗಿರುವ ಪರಿಕಲ್ಪನೆಯನ್ನು ಕಾಣಬಹುದು. ಜನಸಾಮಾನ್ಯರೂ ನಮ್ಮ ಸೇನೆಗಳನ್ನು ಅರಿತುಕೊಳ್ಳುವ ಮತ್ತು ವಿದ್ಯಾರ್ಥಿಗಳಿಗೆ ಸೇನೆಗೆ ಸಂಬಂಧಿಸಿದ ಶಿಕ್ಷಣ ಮತ್ತು ಉದ್ಯೋಗಾವಕಾಶದ ಮಾಹಿತಿಯೂ ಲಭ್ಯವಾಗಲಿದೆ.
–ಡಾ.ಎಂ. ಜಗದೀಶ್ಜಂಟಿ ನಿರ್ದೇಶಕರು, ತೋಟಗಾರಿಕಾ ಇಲಾಖೆ (ಲಾಲ್ಬಾಗ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.