ಇದು ಫ್ಯಾಷನ್ ಜಮಾನ. ಧರಿಸುವ ದಿರಿಸಿನಲ್ಲಿರಲಿ, ಹಾಕುವ ಶೂಗಳಲ್ಲಿರಲಿ, ತಲೆಯ ಕೂದಲುಗಳಲ್ಲೇ ಇರಲಿ... ಯಾವುದಾದರೂ ಒಂದು ಭಿನ್ನತೆ ಅಥವಾ ಹೊಸ ವಿನ್ಯಾಸ ಬಂದ ಕೂಡಲೇ ಅದೊಂದು ಫ್ಯಾಷನ್ ಆಗಿಬಿಡುತ್ತದೆ. ಇಂದು ಉದ್ದದ ಬೂಟುಗಳು, ತೊಡೆಯವರೆಗಿನ ಅರ್ಥಾತ್ ಎತ್ತರದ ಬೂಟುಗಳೂ ಫ್ಯಾಷನ್ ಪ್ರಿಯರ ಮನಸೂರೆಗೊಳಿಸಿವೆ.

ಥೈ– ಹೈ ಬೂಟು ಎಂಬ ಹೆಸರಿನಿಂದ ಜನಜನಿತವಾಗಿರುವ ಈ ಬೂಟುಗಳನ್ನು ವಿವಿಧ ಬಗೆಯ ಬಟ್ಟೆ, ಪಾಲಿಯೆಸ್ಟರ್ ಮೈಕ್ರೋಫೈಬರ್‌ಗಳನ್ನು ಬಳಸಿ ತಯಾರಿಸಲಾಗುತ್ತದೆ. ಝಿಪ್ಪರ್ ಗಳೂ ಇವುಗಳಲ್ಲಿ ಇರುತ್ತವೆ. ಮಹಿಳೆಯರೇ ಹೆಚ್ಚು ಇಷ್ಟ ಪಡುವ ಇಂಥ ಶೂಗಳ ಅಡಿಭಾಗದಲ್ಲಿ ಫ್ಲ್ಯಾಟ್ ಆಗಿರುವಂಥವೂ, ಮತ್ತೆ ಕೆಲವು 3 ಇಂಚ್‌ಗಳಷ್ಟು ಎತ್ತರದ (ಹೈ ಹೀಲ್ಸ್) ಶೂಗಳೂ ಸಿಗುತ್ತವೆ.

ಉದ್ದನೆಯ ಕಾಲುಗಳುಳ್ಳ ಮಹಿಳೆಯರಿಗೆ ಈ ಬೂಟುಗಳು ಹೆಚ್ಚು ಒಪ್ಪುತ್ತವೆ. ಜತೆಗೆ, ಉದ್ದನೆಯ ಕಾಲುಗಳ ಮೆರುಗು ಹೆಚ್ಚಿಸುತ್ತವೆ. ಮಹಿಳೆಯರ ಫ್ಯಾಷನ್ ಜಗತ್ತಿನಲ್ಲಿ ಈ ಬೂಟುಗಳು ಜನಪ್ರಿಯತೆ ಮತ್ತು ವಿನ್ಯಾಸ ಎರಡರಲ್ಲೂ ಪ್ರಮುಖ ಪಾತ್ರ ವಹಿಸುತ್ತಿವೆ.

ಇನ್ನೊಂದು ವಿಶೇಷ ಎಂದರೆ ಇಂಥ ಬೂಟುಗಳ ವಿನ್ಯಾಸ ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇರುತ್ತದೆ. ಹಲವಾರು ಉಡುಪು, ಶೂ ವಿನ್ಯಾಸಕಾರರು ತಮ್ಮ ಸಂಗ್ರಹಗಳಲ್ಲಿ ಇಂಥ ಬೂಟುಗಳನ್ನು ಸಾಮಾನ್ಯವಾಗಿ ಪರಿಚಯಿಸುತ್ತಲೇ ಇರುತ್ತಾರೆ.

ಇತ್ತೀಚೆಗೆ ಸೈಫ್ ಅಲಿ ಖಾನ್ ಅವರ ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಾರಾ ಅಲಿ ಖಾನ್ ಅವರು ಇಂಥ ಶೂಗಳನ್ನು ಧರಿಸಿ ಗಮನ ಸೆಳೆದಿದ್ದರು. ಸಾಮಾನ್ಯವಾಗಿ ಫ್ಯಾಷನ್ ಷೋಗಳಲ್ಲಿ ಇಂಥ ವಿನ್ಯಾಸದ ಒಂದಾದರೂ ಶೂಗಳು ಇದ್ದೇ ಇರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.