ಆಭರಣ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟ್ಟ ಕಂದಮ್ಮಗಳಿಂದ ಹಿಡಿದು ಬಾಳ ಪಯಣದ ಇಳಿ ಸಂಜೆಯ ದಿನಗಳನ್ನು ಕಾಣುತ್ತಿರುವವರಿಗೂ ತಾನು ವಿಶಿಷ್ಟವಾದ ಆಭರಣ ಧರಿಸಬೇಕು ಎಂಬ ಆಸೆ ಇರುತ್ತದೆ. ಧರಿಸಿದ ದಿರಿಸಿಗೆ ಒಪ್ಪುವ, ದೇಹ, ಮುಖಕ್ಕೆ ಹೊಂದುವ ಆಭರಣಗಳನ್ನು ಇಷ್ಟಪಡುವುದು ಕೂಡ ಸಹಜ ಕೂಡ.

ಯಾವ ಬಗೆಯ ಆಭರಣ ಆಯ್ಕೆ ಮಾಡಿಕೊಳ್ಳಬೇಕು. ಅದು ಯಾವುದರಿಂದ ತಯಾರಿಸಿರಬೇಕು. ಅದರ ಬಾಳಿಕೆ ಹೇಗಿರಬೇಕು. ಯಾವ ಬಣ್ಣದಲ್ಲಿ ಇರಬೇಕು ಎಂಬೆಲ್ಲ ಅಂಶಗಳನ್ನು ಆಭರಣ ಖರೀದಿಗೆ ಮುನ್ನ ಆಲೋಚನೆ ಮಾಡುತ್ತೇವೆ.

ಹಗುರವಾಗಿರುವ, ಆಕರ್ಷಣೀಯ ಮತ್ತು ಕೆಲವು ಬಾರಿ ಅಗ್ಗವಾಗಿರುವ ಆಭರಣಕ್ಕೆ ಆಸೆ ಪಡುವವರೇ ಹೆಚ್ಚು. ಅಂಥವರಿಗಾಗಿಯೇ ಇಂದು ಕಾಗದದ ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕೊರಳಿಗೋ, ಮೂಗಿಗೋ, ಕಿವಿಗೋ ಭಾರವಾಗದ, ಜೇಬಿಗೂ ಅತಿಯೆನಿಸದ ಕಾಗದದ ಆಭರಣಗಳು ಮೆರುಗನ್ನು ಇಮ್ಮಡಿಸುತ್ತವೆ.

ಕಾಗದ (ಕ್ವಿಲ್ಲಿಂಗ್ ಪೇಪರ್), ರೇಷ್ಮೆ ಎಳೆ (ಸಿಲ್ಕ್ ಥ್ರೆಡ್) ಮತ್ತು ಟೆರಾಕೋಟ ಆಭರಣಗಳು ಇದೀಗ ನಾರಿಯರ ಕೊರಳನ್ನು ಅಲಂಕರಿಸುತ್ತಿವೆ. ಇವು ಎಲ್ಲ ವಯೋಮಾನದವರಿಗೂ ಸರಿಹೊಂದುತ್ತಿವೆ. ಕಾಲೇಜು ವಿದ್ಯಾರ್ಥಿನಿಯರಿಂದ ಹಿಡಿದು ಕಚೇರಿಗೆ ಹೋಗುವ ಉದ್ಯೋಗಸ್ಥ ಮಹಿಳೆಯರೂ ಈ ಆಧುನಿಕ ಆಭರಣಗಳಿಗೆ ಫಿದಾ ಆಗಿದ್ದಾರೆ. ಇವುಗಳ ಬೆಲೆಯೂ ಕಡಿಮೆ. ಅಲ್ಲದೆ, ಇವುಗಳನ್ನು ಸೀರೆಗಳ ಮೇಲೆ ಮ್ಯಾಚ್ ಮಾಡಿ ಕೂಡ ಧರಿಸಬಹುದು.

ಸಾಂಪ್ರದಾಯಿಕ ಮತ್ತು ಆಧುನಿಕ ಮಾದರಿಯ ದಿರಿಸುಗಳಿಗೂ ಇವುಗಳು ಹೊಂದಾಣಿಕೆ ಆಗುತ್ತವೆ ಎನ್ನುತ್ತಾರೆ ಫ್ಯಾಷನ್ ವಿನ್ಯಾಸಕಿ ಅಲ್ಕಾ ಮೀರಾ.

'ಫ್ಯಾನ್ಸಿ ಆಭರಣ ಧರಿಸಿ ಖುಷಿ ಪಡಬೇಕು ಎಂದು ಹಲವರಿಗೆ ಆಸೆ ಇದ್ದರೂ ಅಂಥ ಕೆಲವು ಆಭರಣಗಳಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಆದರೆ ಪೇಪರ್ ಜುವೆಲರಿಯಿಂದ ಇಂಥ ತೊಂದರೆ ಆಗದು. ಹಲವು ವಿನ್ಯಾಸದ ಕಿವಿಯೋಲೆ, ನೆಕ್ಲೇಸ್, ಬ್ರೇಸ್‌ಲೇಟ್‌ಗಳನ್ನು ಪೇಪರ್‌ನಿಂದ ಮಾಡಲಾಗುತ್ತಿದೆ. ಆಸಕ್ತಿಯಿದ್ದರೆ ಸ್ವತಃ ತಯಾರಿಸಿಕೊಳ್ಳಬಹುದು. ಅದಕ್ಕೆ ಬೇಕಾದ ಪರಿಕರಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಂದಹಾಗೆ ಇದು ಸೂಕ್ಷ್ಮ ಮತ್ತು ಕಷ್ಟದ ಕೆಲಸ. ಆಭರಣ ತಯಾರಿಸುವಾಗ ಎಚ್ಚರವಾಗಿರಬೇಕು' ಎನ್ನುವುದು ಅವರು ಹೇಳುವ ಕಿವಿಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.