ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಸುತ್ತೋಲೆಯೊಂದನ್ನು ಹಂಚಿಕೊಳ್ಳುತ್ತಿದ್ದಾರೆ. ಪರಿಷ್ಕರಣೆಯ ಕಾರಣಕ್ಕಾಗಿ ಎಲ್‌ಐಸಿಯು ತನ್ನ ಎಲ್ಲ ಉತ್ಪನ್ನಗಳನ್ನು ಹಾಗೂ ಪಾಲಿಸಿಗಳನ್ನು ಸೆಪ್ಟೆಂಬರ್ 30ರಿಂದ ಚಾಲ್ತಿಗೆ ಬರುವಂತೆ ಹಿಂಪಡೆಯುತ್ತದೆ ಎಂದು ಪ್ರತಿಪಾದಿಸಲಾಗುತ್ತಿದೆ. ಚಾಲ್ತಿಯಲ್ಲಿರುವ ಪಾಲಿಸಿಗಳ ಪೈಕಿ ಅತ್ಯಂತ ಲಾಭದಾಯಕವಾದ ಪಾಲಿಸಿಗಳನ್ನು ಸೆಪ್ಟೆಂಬರ್ 30ರ ಒಳಗೆ ಪಡೆದುಕೊಳ್ಳಿ ಎಂದು ಸುತ್ತೋಲೆಯನ್ನು ತೋರಿಸಿ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.

ಈ ವಿಚಾರದ ಸತ್ಯಾಸತ್ಯತೆ ಅರಿಯಲು ಎಲ್‌ಐಸಿ ವೆಬ್‌ಸೈಟ್ ಅನ್ನು, ಅದರ ಸಾಮಾಜಿಕ ಜಾಲತಾಣದ ಅಕೌಂಟ್‌ಗಳನ್ನೂ ಪರಿಶೀಲಿಸಲಾಯಿತು. ಸಂಸ್ಥೆಯು ಈ ಸುತ್ತೋಲೆಯ ಬಗ್ಗೆ ಯಾವುದೇ ಪ್ರಕಟಣೆ ಅಥವಾ ಪತ್ರಿಕಾ ಹೇಳಿಕೆ ನೀಡಿಲ್ಲ ಎನ್ನುವುದು ತಿಳಿಯಿತು. ಬದಲಿಗೆ, ಎಲ್‌ಐಸಿಯು ಪ್ರೆಸ್ ಬ್ಯೂರೊ ಆಫ್ ಇಂಡಿಯಾದ ಒಂದು ಪ್ರಕಟಣೆಯನ್ನು ತನ್ನ ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪಾಲಿಸಿ ವಾಪಸ್‌ಗೆ ಸಂಬಂಧಿಸಿದ ಸುತ್ತೋಲೆಯನ್ನು ಎಲ್‌ಐಸಿ ಹೊರಡಿಸಿರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. ಜತೆಗೆ, ಆ ಸುತ್ತೋಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ದಿನಾಂಕ ಇಲ್ಲದೇ ಇದ್ದುದು ಮತ್ತು ವಾಕ್ಯ ರಚನೆ, ಕಾಗುಣಿತದ ತಪ್ಪುಗಳು ಇರುವುದು ಕಂಡುಬಂತು. ಎಲ್‌ಐಸಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುತ್ತೋಲೆಯು ನಕಲಿ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.