ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ಅವರ ವಿದೇಶ ಪ್ರವಾಸದ ಬಗ್ಗೆ ಸಿಖ್ಸ್ ಫಾರ್ ಜಸ್ಟೀಸ್ (ಎಸ್ಎಫ್ಜೆ) ಸಂಘಟನೆಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಖಾಲಿಸ್ತಾನಿ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಘೋಷಿಸಿದ್ದಾರೆ.

1984ರ ಸಿಖ್ ಹತ್ಯಾಕಾಂಡದ ವೇಳೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕಾನೂನುಬಾಹಿರ ಹತ್ಯೆಗಳು ಸೇರಿದಂತೆ ವಿವಿಧ ದೌರ್ಜನ್ಯಗಳನ್ನು ಎಸಗಿದ್ದಾರೆ. ಹಾಗಾಗಿ ದೇಶದಾದ್ಯಂತ ನವೆಂಬರ್ 26ರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಸಿಆರ್ಪಿಎಫ್ ಶಾಲೆಗಳನ್ನು ಬಹಿಷ್ಕರಿಸಬೇಕು ಎಂದು ಗುರುಪತ್ವಂತ್ ಸಿಂಗ್ ಪನ್ನೂ ಒತ್ತಾಯಿಸಿದ್ದಾರೆ.

ಗೃಹ ಸಚಿವ ಶಾ ಅವರು ಭಾರತದ ಸಿಆರ್ಪಿಎಫ್ನ ನೇತೃತ್ವ ವಹಿಸುತ್ತಿದ್ದಾರೆ. ಕೆನಡಾದ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ನ್ಯೂಯಾರ್ಕ್ನಲ್ಲಿ ಸಂಚು ರೂಪಿಸಿದ್ದರು ಎಂದು ಪನ್ನೂ ಆರೋಪಿಸಿದ್ದಾರೆ.

ಈಚೆಗೆ ರಾಷ್ಟ್ರ ರಾಜಧಾನಿ ದೆಹಲಿಯ ರೋಹಿಣಿ ಪ್ರದೇಶದ ಸಿಆರ್ಪಿಎಫ್ ಶಾಲೆ ಬಳಿಯ ಸ್ಫೋಟ ಸಂಭವಿಸಿತ್ತು. ಇದರ ಬೆನ್ನಲ್ಲೇ ದೇಶದಾದ್ಯಂತ ಸಿಆರ್ಪಿಎಫ್ ಶಾಲೆಗಳು ಮತ್ತು ಎರಡು ಕೇಂದ್ರೀಯ ವಿದ್ಯಾಲಯಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿತ್ತು.

ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಯಾರೂ ಪ್ರಯಾಣಿಸಬೇಡಿ. ಕಾಕತಾಳೀಯವೆಂಬಂತೆ, ಸಿಖ್ ಹತ್ಯಾಕಾಂಡಕ್ಕೆ 40 ವರ್ಷ ಪೂರ್ಣಗೊಳ್ಳುವ ನಿರ್ದಿಷ್ಟ ದಿನಾಂಕದಂದು ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ನಡೆಯಲಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನೂ ಎಚ್ಚರಿಕೆ ನೀಡಿದ್ದರು.
.ಖಾಲಿಸ್ತಾನ ಪ್ರತ್ಯೇಕ ರಾಷ್ಟ್ರ ಹೋರಾಟಕ್ಕೆ ರಾಹುಲ್ ಗಾಂಧಿ ಸಮರ್ಥನೆ: ಪನ್ನೂ.ಪನ್ನೂ ಹತ್ಯೆಗೆ ಸಂಚು: ತನಿಖಾ ಫಲಿತಾಂಶದ ನಿರೀಕ್ಷೆ –ಅಮೆರಿಕ.ಪನ್ನೂ ಹತ್ಯೆ ಸಂಚು | ಭಾರತ– ಅಮೆರಿಕ ಸಂಬಂಧಕ್ಕೆ ತೊಂದರೆಯಿಲ್ಲ: ಜೈಶಂಕರ್.ಪನ್ನೂ ಹತ್ಯೆ ಸಂಚಿನಲ್ಲಿ ಭಾರತೀಯ ಅಧಿಕಾರಿ ಭಾಗಿ; ನಿರಾಧಾರ ಆಪಾದನೆ: ಭಾರತ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.