ಮುಂಬೈ: ಮುಂಬೈ ನಗರ ಚೆಂಬೂರ್‌ನಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಗುರುವಾರ ಸಂಜೆ ಸಂಭವಿಸಿದ ಅಗ್ನಿ ಅವಗಢದಲ್ಲಿ 5 ಮಂದಿ ಹಿರಿಯ ನಾಗರಿಕರು ಸಾವಿಗೀಡಾಗಿದ್ದಾರೆ.

ಗುರುವಾರ ಸಂಜೆ 7.45ರ ಹೊತ್ತಿಗೆ ಸರ್ಗಂ ಸೊಸೈಟಿಯ ಬಿ ವಿಂಗ್‍ನ 35ನೇ ಸಂಖ್ಯೆಯ ಕಟ್ಟಡದ 11ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ತಿಲಕ್ ನಗರ್‍ನಲ್ಲಿರುವ ಗಣೇಶ್ ಗಾರ್ಡನ್ ಬಳಿ ಈ ವಸತಿ ಕಟ್ಟಡವಿದೆ.

ವಸತಿ ಕಟ್ಟಡದಲ್ಲಿ ವಾಸಿಸುತ್ತಿದ್ದ 5 ಮಂದಿ ಹಿರಿಯ ನಾಗರಿಕರು ಈ ಅವಗಢದಲ್ಲಿ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಉಸಿರು ಕಟ್ಟಿ ಕಂಗಾಲಾಗಿದ್ದ ಇನ್ನೊಬ್ಬರು ಹಿರಿಯ ನಾಗರಿಕ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರುಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಗ್ನಿ ಅವಗಢಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.ಬೆಂಕಿ ಹತ್ತಿಕೊಂಡಾಗ ಎಲ್‍ಪಿಜಿ ಸಿಲಿಂಡರ್ ಸ್ಫೋಟದಗೊಂಡಿದ್ದು ಬೆಂಕಿಯ ತೀವ್ರತೆ ಹೆಚ್ಚಿಸಿತ್ತು.

ಸಾವಿಗೀಡಾದವರನ್ನು ಸುನಿತ ಜೋಷಿ (72), ಬಾಲಚಂದ್ರ ಜೋಷಿ (72), ಸುಮನ್ ಶ್ರೀನಿವಾಸ್ ಜೋಷಿ (83), ಸರಳಾ ಸುರೇಶ್ ಗಂಗಾರ್ (52 ) ಮತ್ತು ಲಕ್ಷ್ಮೀಬೆನ್ ಪ್ರೇಮ್‍ಜಿ ಗಂಗಾರ್ (83) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.