ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌: ಪೇಟ ಧರಿಸಿ ಫೋಟೊ ತೆಗೆಸಿಕೊಂಡ ದಲಿತ ಯುವಕನ ಮೇಲೆ ಹಲ್ಲೆ

Published 20 ಜುಲೈ 2024, 12:48 IST
Last Updated 20 ಜುಲೈ 2024, 12:48 IST
ಅಕ್ಷರ ಗಾತ್ರ

ಅಹಮದಾಬಾದ್‌: ಸಾಂಪ್ರದಾಯಿಕ ಪೇಟ (ಸಫಾ) ಮತ್ತು ತಂಪು ಕನ್ನಡಕ ತೊಟ್ಟು ತೆಗೆಸಿಕೊಂಡಿದ್ದ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಕಾರಣಕ್ಕೆ 24 ವರ್ಷ ವಯಸ್ಸಿನ ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಗುಜರಾತ್‌ನ ಸಬರ್‌ಕಾಂತ ಜಿಲ್ಲೆಯ ಗ್ರಾಮವೊಂದರಲ್ಲಿ ಇದೇ 17ರಂದು ಇದು ನಡೆದಿದೆ.

ಥಳಿತಕ್ಕೊಳಗಾದ ವ್ಯಕ್ತಿ ಅಜಯ್‌ ಪಾರ್ಮಾರ್‌ ಆಟೊರಿಕ್ಷಾ ಚಾಲಕ. ಹಲ್ಲೆ ಕುರಿತು ಜುಲೈ 18ರಂದು ದೂರು ನೀಡಿರುವ ಅವರು, ‘ಮನೆಗೆ ಮರಳುತ್ತಿದ್ದ ವೇಳೆ ದರ್ಬಾರ್‌ ಸಮುದಾಯದ (ಕ್ಷತ್ರಿಯ) ಇಬ್ಬರು ತಮ್ಮನ್ನು ತಡೆದು ಮನಬಂದಂತೆ ಥಳಿಸಿದರು. ದರ್ಬಾರ್‌ ಸಮುದಾಯದ ಮಂದಿ ಮಾತ್ರ ಸಫಾ ಮತ್ತು ತಂಪು ಕನ್ನಡಕ ಧರಿಸಲು ಯೋಗ್ಯರು. ಹೀಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಚಿತ್ರವನ್ನು ತೆಗೆಯಬೇಕು ಎಂದು ತಾಕೀತು ಮಾಡಿದರು’ ಎಂದಿದ್ದಾರೆ.

‘ಅವರಿಂದ ತಪ್ಪಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಸ್ನೇಹಿತನೊಬ್ಬ ಸಿಕ್ಕು, ಸುಮಾರು 25 ಮಂದಿ ನಿನ್ನನ್ನು ಥಳಿಸಲು ನಿನ್ನ ಮನೆ ಬಳಿ ಕಾಯುತ್ತಿದ್ದಾರೆ ಎಂದು ತಿಳಿಸಿದ. ಬಳಿಕ ನನ್ನ ತಂದೆ ಮತ್ತು ಸಹೋದರನಿಗೆ ಕರೆ ಮಾಡಿ ಸಹಾಯ ಪಡೆದುಕೊಂಡೆ’ ಎಂದು ಸಂತ್ರಸ್ತ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನನ್ನ ತಂದೆಯನ್ನೂ ಅವರು ಥಳಿಸಿದ್ದಾರೆ. ನನ್ನ ತಂದೆ ಪೊಲೀಸರಿಗೆ ಕರೆ ಮಾಡಿದ್ದರು. ಅವರು ಒಂದು ಗಂಟೆ ತಡವಾಗಿ ಬಂದರು. ಅಲ್ಲಿಯವರೆಗೆ ನಾವು ‍ಪ್ರಾಣಕ್ಕೆ ಹೆದರಿ ನಿಂತಲ್ಲಿಯೇ ನಿಂತಿದ್ದೆವು’ ಎಂದೂ ಹೇಳಿದ್ದಾರೆ. 

‘ಅವರಿಂದ ತಪ್ಪಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಸ್ನೇಹಿತನೊಬ್ಬ ಸಿಕ್ಕು, ಸುಮಾರು 25 ಮಂದಿ ನಿನ್ನನ್ನು ಥಳಿಸಲು ನಿನ್ನ ಮನೆ ಬಳಿ ಕಾಯುತ್ತಿದ್ದಾರೆ ಎಂದು ತಿಳಿಸಿದ. ಬಳಿಕ ನನ್ನ ತಂದೆ ಮತ್ತು ಸಹೋದರನಿಗೆ ಕರೆ ಮಾಡಿ ಸಹಾಯ ಪಡೆದುಕೊಂಡೆ’ ಎಂದು ಸಂತ್ರಸ್ತ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಎಫ್‌ಐಆರ್‌ನಲ್ಲಿ ನಾಲ್ವರ ಹೆಸರನ್ನು ಉಲ್ಲೇಖಿಸಲಾಗಿದೆ. ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಫಾ, ಪಾಯಿಂಟೆಡ್‌ ಬೂಟು, ಇತರ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟಿದ್ದಕ್ಕಾಗಿ ಮೇಲ್ವರ್ಗದ ಜನರು ದಲಿತರನ್ನು ಥಳಿಸಿದ ಘಟನೆಗಳು ಈ ಹಿಂದೆಯೂ ಸಾಕಷ್ಟು ಬಾರಿ ನಡೆದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT