ನವದೆಹಲಿ: ಕಳೆದ ಹಣಕಾಸು ವರ್ಷದಲ್ಲಿ ದೇಶದಾದ್ಯಂತ 101 ಏರ್‌ಪೋರ್ಟ್‌ಗಳ ದುರಸ್ತಿ ಹಾಗೂ ನಿರ್ವಹಣೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ₹796 ಕೋಟಿ ಖರ್ಚು ಮಾಡಿದೆ ಎಂದು ಅಧಿಕೃತ ದತ್ತಾಂಶದಿಂದ ಗೊತ್ತಾಗಿದೆ.

2021–22ರ ಹಣಕಾಸು ವರ್ಷದಿಂದ ಈ ಕೆಲಸಗಳಿಗೆ ಖರ್ಚು ಮಾಡುವ ಮೊತ್ತದ ಪ್ರಮಾಣ ಏರಿಕೆಯಾಗಿದೆ. 2023–24ರ ಆರ್ಥಿಕ ವರ್ಷದಲ್ಲಿ ₹ 795.75 ಕೋಟಿ ಖರ್ಚು ಮಾಡಲಾಗಿತ್ತು. 2022–23ರಲ್ಲಿ ₹ 663.42 ಕೋಟಿ ಇತ್ತು.
.ಬೆಂಗಳೂರು ಏರ್ಪೋರ್ಟ್: ₹37.85 ಲಕ್ಷದ 611 ಗ್ರಾಂ ಚಿನ್ನ ಕಳ್ಳ ಸಾಗಣೆ.
2021–22ರಲ್ಲಿ ₹ 535.02 ಕೋಟಿ ಖರ್ಚಾಗಿತ್ತು ಎಂದು ನಾಗರಿಕ ವಿಮಾನಯಾನ ಸಚಿವಾಲಯ ರಾಜ್ಯಸಭೆಗೆ ಮಾಹಿತಿ ನೀಡಿದೆ.

121 ಏರ್‌ಪೋರ್ಟ್‌ಗಳ ದುರಸ್ತಿ ಹಾಗೂ ನಿರ್ವಹಣೆಯ ದತ್ತಾಂಶವನ್ನು ರಾಜ್ಯಸಭೆಗೆ ನೀಡಲಾಗಿದ್ದು, ಈ ಪೈಕಿ 20 ವಿಮಾನ ನಿಲ್ದಾಣಗಳಿಗೆ ಯಾವುದೇ ಖರ್ಚು ಮಾಡಿಲ್ಲ ಎಂದು ಸಚಿವಾಲಯ ಹೇಳಿದೆ.
.ಜ.1ರಿಂದ ‘ಸೈಲೆಂಟ್ ಏರ್ಪೋರ್ಟ್’ ಆಗಲಿದೆ ತಿರುವನಂತಪುರ ವಿಮಾನ ನಿಲ್ದಾಣ.
ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ಸೇರಿ ದೇಶದ ಹಲವು ವಿಮಾನ ನಿಲ್ದಾಣಗಳ ಛಾವಣಿ ಕುಸಿದು ಬಿದ್ದ ಬಳಿಕ, ಏರ್‌ಪೋರ್ಟ್‌ಗಳ ನಿರ್ವಹಣೆ ಬಗ್ಗೆ ಹಲವು ಪ್ರಶ್ನೆ ಎದ್ದಿತ್ತು.

ವಿಮಾನ ನಿಲ್ದಾಣದ ಕಟ್ಟಡಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳ ಸ್ಥಿರತೆಯ ಬಗ್ಗೆ ಮೂರನೇ ವ್ಯಕ್ತಿ ಆಡಿಟ್ ಕೈಗೊಳ್ಳಲು ಎಲ್ಲಾ ವಿಮಾನ ನಿಲ್ದಾಣ ನಿರ್ವಾಹಕರಿಗೆ ಸೂಚಿಸಲಾಗಿದೆ ಎಂದು ಜುಲೈ 29 ರಂದು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಹೇಳಿದ್ದಾರೆ.
.ಒಳನೋಟ: ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಏರ್ಪೋರ್ಟ್ ಟೇಕಾಫ್ಗೇ ಗ್ರಹಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.