ನವದೆಹಲಿ:ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ಜಾಮೀನು ಅರ್ಜಿ ಕುರಿತ ಆದೇಶವನ್ನು ಕಾಯ್ದಿರಿಸಿದ ದೆಹಲಿ ಕೋರ್ಟ್, ಅವರನ್ನು ಏಳು ದಿನಗಳ ಕಾಲಜಾರಿ ನಿರ್ದೇಶನಾಲಯ (ಇ.ಡಿ.)ಕಸ್ಟಡಿ ನೀಡಿದೆ.

57 ವರ್ಷದ ಬ್ರಿಟಿಷ್ ದೇಶದ ಮಿಷೆಲ್ ಅವರನ್ನು ಶುಕ್ರವಾರ ಬಂಧಿಸಿದ್ದ ಇ.ಡಿ ಅಧಿಕಾರಿಗಳು, ಶನಿವಾರವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಮುಂದೆಹಾಜರುಪಡಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಷೆಲ್ ವಿಚಾರಣೆ ಮಾಡಬೇಕಿದ್ದು, ತಮ್ಮ ಕಸ್ಟಡಿಗೆ ನೀಡಬೇಕೆಂದು ಜಾರಿ ನಿರ್ದೇಶನಾಲಯ (ಇಡಿ) ಮನವಿ ಮಾಡಿದ್ದರಿಂದ, ಕೋರ್ಟ್ ಹಾಲ್ನಲ್ಲಿಯೇ ವಿಚಾರಣೆಗೆ15 ನಿಮಿಷ ಕಾಲಾವಕಾಶ ನೀಡಿತ್ತು. ಇದಾದ ನಂತರ ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಇ.ಡಿ. ಕಸ್ಟಡಿಗೆ ನೀಡಿದೆ.

ತಿಹಾರ್ ಜೈಲಿನಲ್ಲಿ ವಿಶೇಷ ಕೊಠಡಿ ಬೇಕೆಂದು ಕೋರಿದ್ದ ಮಿಷೆಲ್ ಅರ್ಜಿಯನ್ನುವಜಾಗೊಳಿಸಿದ ನ್ಯಾಯಾಧೀಶರು,ಈಗಾಗಲೇ ಪ್ರತ್ಯೇಕ ಕೊಠಡಿ ನೀಡಲಾಗಿದೆ ಎಂದು ಹೇಳಿದರಲ್ಲದೆ,ಮಿಷೆಲ್ಗೆ ಸೂಕ್ತ ಭದ್ರತೆ ನೀಡುವಂತೆ ತಿಹಾರ್ ಜೈಲು ಸಿಬ್ಬಂದಿಗೆ ಸೂಚಿಸಿದರು.ಮಿಷೆಲ್ ಜಾಮೀನು ಅರ್ಜಿ ಆದೇಶವನ್ನು ಡಿ.28ರವರೆಗೆ ಕಾಯ್ದಿರಿಸಿದ್ದಾರೆ.

ಕ್ರಿಶ್ಚಿಯನ್ ಅವರನ್ನು ಡಿಸೆಂಬರ್ 4ರಂದು ಸಂಯುಕ್ತ ಅರಬ್ ಒಕ್ಕೂಟದಲ್ಲಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

ಗಣ್ಯರ ಬಳಕೆ ಹೆಲಿಕಾಪ್ಟರ್ ಖರೀದಿ ಯಲ್ಲಿ ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾದ ₹3,600 ಕೋಟಿ ಮೊತ್ತದ ಹಗರಣದಲ್ಲಿ ಮಿಷೆಲ್ ಭಾರತಕ್ಕೆ ಬೇಕಾಗಿದ್ದರು. ಈ ಹೆಲಿಕಾಪ್ಟರ್ ಖರೀದಿಯಲ್ಲಿ ಮೈಕೆಲ್ ಸುಮಾರು ₹225 ಕೋಟಿ ಮೊತ್ತವನ್ನು ಮಿಷೆಲ್ ಲಂಚ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು 2016ರ ಜೂನ್ ತಿಂಗಳಲ್ಲಿ ದೋಷಾರೋಪ ಪಟ್ಟಿ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.