ಶಿಮ್ಲಾ: ಮುಸ್ಲಿಂ ವ್ಯಾಪಾರಿಗಳು ಹಿಮಾಚಲ ಪ್ರದೇಶದ ಸೇಬು ಹಣ್ಣುಗಳನ್ನು ಬಹಿಷ್ಕರಿಸಬೇಕು ಎಂದು ಎಐಎಂಐಎಂ ಪಕ್ಷದ ನಾಯಕ ಶೊಯೇಬ್ ಜಮಾಯಿ ಕರೆ ನೀಡಿದ್ದಾರೆ.

ಶಿಮ್ಲಾದ ಸಂಜೌಲಿ ಮಸೀದಿಯನ್ನು ತೆರವುಗೊಳಿಸಲು ನ್ಯಾಯಾಲಯದ ಆದೇಶ ಇರುವುದರಿಂದ ಕಳೆದ ವಾರ ವಿಡಿಯೊ ಭಾಷಣ ಮಾಡಿದ್ದ ಶೊಯೇಬ್ ಜಮಾಯಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಅವರು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾರತದಲ್ಲಿ ಶೇ. 80 ರಷ್ಟು ಮುಸ್ಲಿಂ ವ್ಯಾಪಾರಿಗಳೇ ಹಿಮಾಚಲ ಸೇಬು ಖರೀದಿಸಿ ಮಾರಾಟ ಮಾಡುತ್ತಾರೆ. ಇದರಿಂದ ಹಿಮಾಚಲ ಪ್ರದೇಶದ ಆರ್ಥಿಕತೆ, ಕೃಷಿ ಬೆಳೆದಿದೆ. ಆದರೆ, ಮುಸಲ್ಮಾನರಿಗೆ ಅಲ್ಲಿ ಅವಮಾನಿಸಲಾಗುತ್ತಿದೆ. ಹಾಗಾಗಿ ಈ ಎಲ್ಲ ಮುಸ್ಲಿಂ ವ್ಯಾಪಾರಸ್ಥರು ಹಿಮಾಚಲ ಸೇಬು ಖರೀದಿಸುವುದನ್ನು ಬಿಡಬೇಕು ಎಂದು ನಾನು ಕರೆ ನೀಡುತ್ತೇನೆ ಎಂದು ಪೋಸ್ಟ್ ಮಾಡಿದ್ದರು.

ಶೊಯೇಬ್ ಜಮಾಯಿ ಪೋಸ್ಟ್ಗೆ ತೀವ್ರ ವಿರೋಧ ವ್ಯಕ್ತವಾದ ನಂತರ ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿರುವ ಅವರು, ನನ್ನ ಟ್ವೀಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಯಾವುದೇ ಸಮಾಜವನ್ನು ದ್ವೇಷಿಸುವುದಿಲ್ಲ. ಇಡೀ ಭಾರತ ಒಂದೇ ಎಂದು ಹೇಳಿದ್ದಾರೆ.

ಶೊಯೇಬ್ ಜಮಾಯಿ ಹೇಳಿಕೆ ಖಂಡಿಸಿರುವ ಹಿಮಾಚಲ ಪ್ರದೇಶ ಬಿಜೆಪಿ ಘಟಕ, ದ್ವೇಷ ಭಾಷಣ ಮಾಡುತ್ತಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.