ನವದೆಹಲಿ: ಏರ್ ಇಂಡಿಯಾದ ವಿಮಾನ ಪ್ರಯಾಣ ನಿರ್ವಹಣಾ ಸಾಫ್ಟ್ವೇರ್ನಲ್ಲಿ (ಎಸ್ಐಟಿಎ) ಶನಿವಾರ ಬೆಳಗ್ಗಿನ ಜಾವ ಉಂಟಾಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ಸ್ಥಗಿತಗೊಂಡಿದ್ದ ವಿಮಾನ ಪ್ರಯಾಣ ಪ್ರಾರಂಭಗೊಂಡಿದೆ.

ವಿಶ್ವದೆಲ್ಲೆಡೆಯ ಏರ್ ಇಂಡಿಯಾ ಸಂಸ್ಥೆಯ ವಿಮಾನ ಪ್ರಯಾಣ ನಿರ್ವಹಣಾ ವ್ಯವಸ್ಥೆ ಬೆಳಿಗ್ಗೆ 3.30 ರಿಂದ 4.30ರವರೆಗೆ ಸ್ಥಗಿತ ಸ್ಥಗಿತಗೊಂಡಿತ್ತು. ಇದರಿಂದ ವಿಮಾನಗಳ ಹಾರಾಟದಲ್ಲೂ ವಿಳಂಬವಾಗಿದ್ದು, ಸಾಕಷ್ಟು ಮಂದಿ ಪ್ರಯಾಣಿಕರು ಪರದಾಡಿದರು.

ಏರ್ ಇಂಡಿಯಾದ ತಾಂತ್ರಿಕ ಸೇವೆಗಳನ್ನು ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಎಸ್ಐಟಿಎ(ಸೊಸೈಟಿ ದಿ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಷನ್ ಏರೋನಾಟಿಕ್ಸ್) ನಿರ್ವಹಿಸುತ್ತಿದೆ.

’ಬೆಳಿಗ್ಗೆ 3.30ರಿಂದ 4.30ರವರೆಗೆ ಅವಧಿಯಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕಾರ್ಯ ನಡೆಯಿತು. 8.45ರವರೆಗೂ ಸರ್ವರ್ ಡೌನ್ ಇತ್ತು. ಬೆಳಿಗ್ಗಿನ ವೇಳೆ ವಿಮಾನಗಳು ವಿಳಂಬವಾಗುತ್ತಿರುತ್ತವೆ‘ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಸಿಡ್ನಿಯಲ್ಲೂ ಏರ್ಇಂಡಿಯಾ ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನಗಳನ್ನು ಏರಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

’ಇತರೆ ಸೇವೆಗಳು ಎಂದಿನಂತೆ ಚಾಲ್ತಿಯಲ್ಲಿದ್ದವು. ಸಮಸ್ಯೆ ಸರಿಪಡಿಸಿದ ಬಳಿಕ ಎಲ್ಲ ವಿಮಾನಗಳು ಬೆಳಿಗ್ಗೆ 9ರ ನಂತರ ಪ್ರಯಾಣ ಮುಂದುವರಿಸಿದವು ಎನ್ನಲಾಗಿದೆ’ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ವಕ್ತಾರ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.