ನವದೆಹಲಿ: ಮಹಿಳೆಯರೇ ಎಲ್ಲ ಕಾರ್ಯಾಚರಣೆ ನಡೆಸುವ, ಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾದ (ಎಸ್‌ಸಿಐ) ‘ಎಂಟಿ ಸ್ವರ್ಣ ಕೃಷ್ಣಾ‘ ಹಡಗು ಯಾನಕ್ಕೆ ಕೇಂದ್ರ ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವ ಮನಸುಖ್ ಮಾಂಡವೀಯ ಹಸಿರು ನಿಶಾನೆ ತೋರಿಸಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ಸಚಿವ ಮಾಂಡವೀಯ ಅವರು ಈ ನೌಕಾಯಾನಕ್ಕೆ ಹಸಿರು ನಿಶಾನೆ ತೋರಿದರು. ಎಸ್‌ಸಿಐನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ.ಜೋಶಿ, ಸಚಿವಾಲಯದ ಕಾರ್ಯದರ್ಶಿ ಸಂಜೀವ್ ರಂಜನ್, ಜೆಎನ್‌ಪಿಟಿ ಚೇರಮನ್ ಸಂಜಯ್ ಸೇಠಿ, ಮುಂಬೈ ಪೋರ್ಟ್ ಟ್ರಸ್ಟ್‌ನ ಚೇರ್ಮನ್ ರಾಜೀವ್ ಜಲೋಟಾ ಅವರು ಸಹ ಆನ್‌ಲೈನ್ ಮೂಲಕ ನಡೆದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮಹಿಳಾ ಸಿಬ್ಬಂದಿಯೇ ನೌಕಾಯಾನದ ಸಾರಥ್ಯ ವಹಿಸಿರುವ ವಿಶ್ವದ ಮೊದಲ ಕಾರ್ಯಾಚರಣೆ ಇದಾಗಿದೆ ಎಂದು ಬಂದರು, ಹಡಗು ಹಾಗೂ ಜಲಸಾರಿಗೆ ಸಚಿವಾಲಯ ಭಾನುವಾರ ಹೇಳಿದೆ.

‘ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವಶಿಪ್ಪಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ, ಮಹಿಳಾ ದಿನವನ್ನೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ದೃಷ್ಟಿಯಿಂದ ಈ ಕಾರ್ಯ ಕೈಗೊಂಡಿದೆ’ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.