ನವದೆಹಲಿ:‘ತಮ್ಮ ಮೇಲೆ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಸುಳ್ಳು’ ಎಂದು ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಹೇಳಿದ್ದಾರೆ.

ಎಂ.ಜೆ. ಅಕ್ಬರ್ ವಿರುದ್ಧ ಹಲವು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮೀ ಟೂ ಅಭಿಯಾದಲ್ಲಿ (#MeToo) ಸಚಿವರ ವಿರುದ್ಧ ಆರೋಪ ಮಾಡಲಾಗಿತ್ತು.

ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ಕೆಲವೇ ಗಂಟೆಗಳಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಕ್ಬರ್ ಅವರು, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು. ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

‘ನಮ್ಮ ವಿರುದ್ಧ ಮಾಡಿರುವ ದುರುಪಯೋಗದ ಆರೋಪಗಳು ಸುಳ್ಳು ಮತ್ತು ಕೃತ್ರಿಮವಾಗಿವೆ. ಈ ಸುಳ್ಳು, ಆಧಾರವಿಲ್ಲದ ಮತ್ತು ಸ್ವೇಚ್ಛಾಚಾರದ ಆರೋಪಗಳು ನಮ್ಮ ವ್ಯಕ್ತಿತ್ವಕ್ಕೆ ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಿವೆ’ ಎಂದು ಹೇಳಿದ್ದಾರೆ.

ಎಂ.ಜೆ. ಅಕ್ಬರ್ ವಿರುದ್ಧ ಹಲವು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮೀ ಟೂ ಅಭಿಯಾದಲ್ಲಿ (#MeToo) ಸಚಿವರ ವಿರುದ್ಧ ಆರೋಪ ಮಾಡಲಾಗಿತ್ತು. ನಂತರ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ನೈಜೀರಿಯಾ ಪ್ರವಾಸದಲ್ಲಿದ್ದ ಅಕ್ಬರ್ ಭಾನುವಾರ ಬೆಳಿಗ್ಗೆ ವಾಪಸಾಗಿದ್ದಾರೆ.

* ಇದನ್ನೂ ಓದಿ... #MeToo ಪರಿಣಾಮ: ಸಚಿವ ಸ್ಥಾನಕ್ಕೆ ಎಂ.ಜೆ. ಅಕ್ಬರ್ ರಾಜೀನಾಮೆ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ ನೀಡಿರುವುದಾಗಿ ಖಚಿತಪಡಿಸಲಾರದ ಮೂಲಗಳನ್ನು ಉಲ್ಲೇಖಿಸಿ ಕೆಲವು ಸುದ್ದಿವಾಹಿನಿಗಳು ವರದಿ ಮಾಡಿವೆ.

ಇದನ್ನೂ ಓದಿ:ಮಿ–ಟೂ ಅಟಾಟೋಪ: ಸಚಿವ ಅಕ್ಬರ್ ತಲೆದಂಡಕ್ಕೆ ಒತ್ತಡ

ಅಕ್ಬರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಯಾವ ಖಾತರಿಯೂ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ಈ ಹಿಂದೆ ತಿಳಿಸಿದ್ದವು.

ಪತ್ರಕರ್ತೆ ಪ್ರಿಯಾ ರಮಣಿಯಿಂದ ಶುರುವಾಗಿದ್ದ ಆರೋಪ...

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಬಗ್ಗೆ ಪತ್ರಕರ್ತೆ ಪ್ರಿಯಾ ರಮಣಿ ಅವರುವೋಗ್ ಇಂಡಿಯಾದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೇಖನವೊಂದನ್ನು ಬರೆದಿದ್ದರು. ಆದರೆ, ಅದರಲ್ಲಿ ಎಲ್ಲಿಯೂ ಅಕ್ಬರ್ ಹೆಸರನ್ನು ಉಲ್ಲೇಖಿಸಿರಲಿಲ್ಲ. ಇತ್ತೀಚೆಗೆ ಟ್ವೀಟ್ ಮಾಡಿದ್ದ ಅವರು,‘ಎಂಜೆ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ; ಯಾಕೆಂದರೆ ಅವರೇನೂ ‘ಮಾಡಿಲ್ಲ’. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರದನ್ನು ಹಂಚಿಕೊಳ್ಳಬಹುದು’ ಎಂದು ಬರೆದಿದ್ದರು. ಇದಾದ ನಂತರ ಹಲವು ಪತ್ರಕರ್ತೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಇದನ್ನೂ ಓದಿ:ಮೋದಿ ಸಂಪುಟಕ್ಕೂ ತಟ್ಟಿದ #MeToo ಬಿಸಿ: ಸಚಿವ ಎಂಜೆ ಅಕ್ಬರ್ ವಿರುದ್ಧ ಆರೋಪ

ಅಕ್ಬರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಅವರು, ಮೀ ಟೂ ಅಭಿಯಾನದ ಮೂಲಕ ಕೇಳಿ ಬಂದ ಲೈಂಗಿಕ ಕಿರುಕುಳದ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದ್ದೇವೆ ಎಂದು ಹೇಳಿದ್ದರು.

ಇದನ್ನೂ ಓದಿ:#MeToo: ಸಚಿವ ಅಕ್ಬರ್ ವಿರುದ್ಧದ ಆರೋಪದ ಬಗ್ಗೆ ಪರಿಶೀಲಿಸುತ್ತೇವೆ ಎಂದ ಅಮಿತ್ ಶಾ

ಇನ್ನಷ್ಟು...

*ಲೈಂಗಿಕ ಕಿರುಕುಳ: ಮತ್ತಷ್ಟು ಪ್ರಕರಣಗಳಿಗೆ ಮರುಜೀವ

*ಲೈಂಗಿಕ ಕಿರುಕುಳ ಆರೋಪ: ಸ್ಥಾನ ತೊರೆದ ಹಿಂದೂಸ್ತಾನ್ ಟೈಮ್ಸ್ ಬ್ಯೂರೊ ಮುಖ್ಯಸ್ಥ

*ಕಂಗನಾಗೂ ಲೈಂಗಿಕ ಕಿರುಕುಳ ಕೊಟ್ಟಿದ್ರಂತೆ

*ಸಿನಿಮಾ ಮಾತ್ರವಲ್ಲ, ಇನ್ನಿತರ ಕ್ಷೇತ್ರಗಳಲ್ಲಿಯೂ #MeToo ಕತೆಗಳಿವೆ: ಶೋಭಾ ಡೇ

*ಲೈಂಗಿಕ ಕಿರುಕುಳ ಬಗ್ಗೆ ದೂರು ನೀಡಲು ಸಮಯ ಪರಿಧಿ ಬೇಕಾಗಿಲ್ಲ: ಮನೇಕಾ ಗಾಂಧಿ

*ಮಹಿಳೆಯರನ್ನು ದುಷ್ಕೃತ್ಯಕ್ಕೆ ಒಳಪಡಿಸಬಾರದು: #MeToo ಬಗ್ಗೆ ಬಚ್ಚನ್ ಪ್ರತಿಕ್ರಿಯೆ

*#MeToo: ಅಮಿತಾಬ್ ಬಚ್ಚನ್ ಸಹ ಬೆಲೆ ತೆರಬೇಕಾಗಲಿದೆ ಎಂದ ಸಪ್ನಾ ಭವಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.