ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂಸಾಚಾರ ತ್ಯಜಿಸಿ ಶರಣಾಗಿ: ನಕ್ಸಲರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ

Published : 20 ಸೆಪ್ಟೆಂಬರ್ 2024, 6:32 IST
Last Updated : 20 ಸೆಪ್ಟೆಂಬರ್ 2024, 6:32 IST
ಫಾಲೋ ಮಾಡಿ
Comments

ನವದೆಹಲಿ: ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನಕ್ಸಲರಿಗೆ ಶುಕ್ರವಾರ ಕರೆ ನೀಡಿದ್ದಾರೆ. 

ಸರ್ಕಾರಕ್ಕೆ ಶರಣರಾಗಿರುವ 55 ನಕ್ಸಲರನ್ನು ಉದ್ದೇಶಿಸಿ ಅವರು ತಮ್ಮ ನಿವಾಸದಲ್ಲಿ ಅವರು ಮಾತನಾಡಿದರು.

ಹಿಂಸಾಚಾರ ಬಿಟ್ಟು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿ, ಇಲ್ಲದಿದ್ದರೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. 2026ರ ಮಾರ್ಚ್‌ ವೇಳೆಗೆ ನಕ್ಸಲಿಸಂ ಕೊನೆಗಾಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. 

ನಕ್ಸಲ್ ಹಿಂಸಾಚಾರ ಮತ್ತು ಸಿದ್ಧಾಂತವನ್ನು ದೇಶದಿಂದ ತೊಡೆದು ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಈ ಹಿಂದೆ ಪಶುಪತಿನಾಥದಿಂದ (ನೇಪಾಳ) ತಿರುಪತಿ(ಆಂಧ್ರಪ್ರದೇಶ)ವರೆಗೂ ನಕ್ಸಲ್‌ ಕಾರಿಡಾರ್ ಸ್ಥಾಪಿಸಲು ಮಾವೋವಾದಿಗಳು ಯೋಜಿಸಿದ್ದರು. ಇದನ್ನು ಮೋದಿ ಸರ್ಕಾರ ನಾಶಪಡಿಸಿತು ಎಂದು ಅವರು ಹೇಳಿದರು.

ಶರಣಾಗುವಂತೆ ನಾನು ನಕ್ಸಲರಿಗೆ ಪದೇ ಪದೇ ಮನವಿ ಮಾಡುತ್ತೇನೆ. ನೀವು ಕೇಳದಿದ್ದರೆ, ನಿಮ್ಮನು ಕೊನೆಗೊಳಿಸಲು ಶೀಘ್ರದಲ್ಲೇ ಸಂಪೂರ್ಣ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಮಿತ್ ಶಾ ಪುನರುಚ್ಚರಿಸಿದರು.

ಶೀಘ್ರದಲ್ಲೇ ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಮಾಡಿ ಛತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶಗಳ ಜನರಿಗೆ ಕಲ್ಯಾಣ ಯೋಜನೆಯನ್ನು ರೂಪಿಸಲಿದೆ. ಉದ್ಯೋಗ, ಆರೋಗ್ಯ, ರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿ ಕಲ್ಯಾಣ ಕ್ರಮಗಳ ಮೂಲಕ ನಾವು ನಿಮಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT