ಅಮರಾವತಿ: ಆಂಧ್ರಪ್ರದೇಶ ಸರ್ಕಾರ 2021–22 ಹಣಕಾಸು ವರ್ಷಕ್ಕಾಗಿ ₹ 2.29 ಲಕ್ಷ ಕೋಟಿ ಗಾತ್ರದ ಬಜೆಟ್ ಅನ್ನು ಗುರುವಾರ ಮಂಡಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಮೂಲಗಳಿಂದ ₹ 1.77 ಲಕ್ಷ ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ₹ 5,000 ಕೋಟಿಯಷ್ಟು ಕಡಿಮೆ ರಾಜಸ್ವ ಸಂಗ್ರಹವಾಗಲಿದ್ದು, ಆದಾಯದಲ್ಲಿ ಒಟ್ಟು ₹ 37,029 ಕೋಟಿ ಕೊರತೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಿಶ್ವಭೂಷಣ್ ಹರಿಚಂದ್ರನ್ ಅವರು ಭಾಷಣ ಮಾಡಿದ ನಂತರ, ಹಣಕಾಸು ಸಚಿವ ಬುಗ್ಗನ ರಾಜೇಂದ್ರನಾಥ್ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು.

2021–22ನೇ ಹಣಕಾಸು ವರ್ಷದಲ್ಲಿ ರಾಜ್ಯದ ಜನತೆ ಮೇಲೆ ₹ 3,87,125 ಕೋಟಿ ಸಾಲದ ಹೊರೆ ಬೀಳಲಿದೆ. ಕಳೆದ ಹಣಕಾಸು ವರ್ಷದ ಸಾಲದ ಮೊತ್ತ ₹ 3,55,874 ಕೋಟಿಗೆ ಹೋಲಿಸಿದರೆ ಈ ಬಾರಿ ಸಾಲ ಪಡೆಯುವ ಮೊತ್ತದಲ್ಲಿ ₹ 50,525 ಕೋಟಿ ಹೆಚ್ಚಳ ಇರಲಿದೆ ಎಂದು ಅವರು ಸದನಕ್ಕೆ ತಿಳಿಸಿದರು.

ಮಹಿಳೆಯರು ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಕ್ರಮವಾಗಿ ₹ 23,463 ಕೋಟಿ ಹಾಗೂ ₹ 16,748 ಕೋಟಿ ಗಾತ್ರದ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದೂ ಸಚಿವ ರಾಜೇಂದ್ರನಾಥ್ ತಿಳಿಸಿದರು.

ಸಾಲ ತೀರಿಸುವ ಸಂಬಂಧ ಈ ವರ್ಷ ರಾಜ್ಯ ಸರ್ಕಾರ ₹ 23,205.88 ಕೋಟಿ ವ್ಯಯಿಸಲಿದೆ. ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಣೆ ಮಾಡಿರುವ ಸರ್ಕಾರ, ಇದಕ್ಕಾಗಿ ₹ 48,083.92 ಕೋಟಿ ತೆಗೆದಿರಿಸಿರುವುದು ಬಜೆಟ್ ದಾಖಲೆಗಳಿಂದ ತಿಳಿದುಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.