ನವದೆಹಲಿ (ಪಿಟಿಐ): ರಕ್ಷಣಾ ಕ್ಷೇತ್ರದಲ್ಲಿ ದೇಶದ ಒಟ್ಟು ಚಿತ್ರಣ ಹಾಗೂ ಭಾರತೀಯ ಸೇನೆಯ ಶ್ರೀಮಂತ ಪರಂಪರೆ, ಮಹಾಭಾರತ ಮಹಾಕಾವ್ಯದ ಯುದ್ಧದ ಸನ್ನಿವೇಶಗಳನ್ನು ‘ಉದ್ಭವ್’ ಯೋಜನೆಯಡಿ ಭಾರತೀಯ ಸೇನೆಯು ಪ್ರದರ್ಶಿಸಲಿದೆ.

‘ಭಾರತದ ಭಿನ್ನ ಸಂಸ್ಕೃತಿಯ ಐತಿಹಾಸಿಕ ಸ್ವರೂಪ’ ವಿಷಯ ಕುರಿತು ಮಂಗಳವಾರ ಇಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಸೇನೆ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಈ ವಿಷಯ ತಿಳಿಸಿದರು.

‘ಉದ್ಭವ್ ಯೋಜನೆಗೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಯೋಜನೆಯಡಿ ವೇದ, ಪುರಾಣ, ಉಪನಿಷದ್, ಅರ್ಥಶಾಸ್ತ್ರಗಳ ಆಳವಾದ ಅಧ್ಯಯನ ನಡೆಸಲಿದ್ದು, ಭಾರತೀಯ ಮತ್ತು ಪಾಶ್ಚಿಮಾತ್ಯ ವಿದ್ವಾಂಸರ ನಡುವಿನ ಬೌದ್ಧಿಕ ಸಮಾನಾಂಶಗಳನ್ನು ದಾಖಲಿಸಲಾಗುವುದು’ ಎಂದು ತಿಳಿಸಿದರು.

ಭವಿಷ್ಯದ ಸವಾಲುಗಳನ್ನು ಎದುರಿಸಲು ಸೇನೆಯನ್ನು ಸನ್ನದ್ಧಗೊಳಿಸುವ ಕ್ರಮವಾಗಿ ಸೇನೆಯ ಸಮಕಾಲೀನ ಅಗತ್ಯಗಳು ಹಾಗೂ ಭಾರತೀಯ ಪ್ರಾಚೀನ ಕಾರ್ಯತಂತ್ರವನ್ನು ಒಗ್ಗೂಡಿಸುವುದು. ಈ ಮೂಲಕ ದೇಶೀಯ ಧರ್ಮಬೋಧೆಗೆ ಉತ್ತೇಜನ ನೀಡುವುದು ಯೋಜನೆಯ ಉದ್ದೇಶವಾಗಿದೆ ಎಂದರು.

ಭಾರತೀಯ ಇತಿಹಾಸ, ಪರಂಪರೆಯ ಸಂಭ್ರಮಾಚರಣೆಯನ್ನು ಶ್ಲಾಘಿಸಿದ ಸೇನೆಯ ಮುಖ್ಯಸ್ಥರು, ರಾಷ್ಟ್ರೀಯ ಸಂಸ್ಕೃತಿ, ಗುರುತ್ವದ ಭಾಗವಾಗಿ ಇದನ್ನು ಆಚರಿಸುತ್ತಿರುವುದು ಸಂತಸಕರ ಎಂದರು.

ಸೇನೆಯು ಇದೇ ಸಂದರ್ಭದಲ್ಲಿ ‘ಪ್ರಾಚೀನತೆಯಿಂದ ಸ್ವಾತಂತ್ರ್ಯದವರೆಗೆ: ಭಾರತೀಯ ಸೇನೆಯ ಪರಿಕರ, ಯುದ್ಧ, ಕಾರ್ಯತಂತದ ವಿಕಸನ’ ಕುರಿತು ಪ್ರದರ್ಶನವನ್ನು ಆಯೋಜಿಸಿತ್ತು.

ಈ ಪ್ರದರ್ಶನವನ್ನು ನಮ್ಮ ಇತಿಹಾಸದ ಜೊತೆಗೆ ಜಾಗತಿಕ ನೆಲೆಗಟ್ಟಿನಲ್ಲಿ ದೇಶದ ಸ್ಥಾನವನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.