ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಮ್ಮು ಮತ್ತು ಕಾಶ್ಮೀರ: ನಾಗರಿಕರ ನಿಗೂಢ ಸಾವು; ಆಂತರಿಕ ತನಿಖೆಗೆ ಸೇನೆ ಆದೇಶ

Published 24 ಡಿಸೆಂಬರ್ 2023, 13:26 IST
Last Updated 24 ಡಿಸೆಂಬರ್ 2023, 13:26 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ಮೂವರು ನಾಗರಿಕರು ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ಬಗ್ಗೆ ಸಮಗ್ರ ಆಂತರಿಕ ತನಿಖೆಗೆ ಸೇನೆಯು ಭಾನುವಾರ ಆದೇಶಿಸಿದೆ.

ಸೇನಾ ವಾಹನಗಳ ಮೇಲೆ ಡಿ.21 ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಸೇನೆಯ ಸಿಬ್ಬಂದಿ ಕರೆದೊಯ್ದಿದ್ದ ಮೂವರು ಡಿ.22 ರಂದು ನಿಗೂಢವಾಗಿ ಸಾವನ್ನಪ್ಪಿದ್ದರು. 

‘ಸೇನೆಯು ಕರೆದೊಯ್ದಿದ್ದ ಎಂಟು ಮಂದಿಯಲ್ಲಿ ಈ ಮೂವರು ಇದ್ದರು. ವಿಚಾರಣೆ ವೇಳೆ ನೀಡಿದ ಹಿಂಸೆಯಿಂದಾಗಿ ಅವರು ಮೃತಪಟ್ಟಿದ್ದಾರೆ’ ಎಂದು ಮೃತರ ಸಂಬಂಧಿಕರು ಮತ್ತು ಕೆಲವು ರಾಜಕೀಯ ಮುಖಂಡರು ಆರೋಪಿಸಿದ್ದರು.

‘ಈ ಘಟನೆ (ನಾಗರಿಕರ ಸಾವು) ಬಗ್ಗೆ ಸಮಗ್ರ ತನಿಖೆಗೆ ಸೇನೆಯು ಆದೇಶಿಸಿದೆ’ ಎಂದು ಮೂಲಗಳು ಹೇಳಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕೂಡಾ ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೊಲೀಸರ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸೇನೆಯು ಶನಿವಾರ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT