ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೂಂಚ್‌: ಪಾಕಿಸ್ತಾನದ ಗನ್‌ಗಳು, ಚೀನಾ ಗ್ರೆನೇಡ್ ಸೇರಿ ಭಾರಿ ಪ್ರಮಾಣದ ಸ್ಫೋಟಕ ವಶ

Published : 6 ಅಕ್ಟೋಬರ್ 2024, 2:48 IST
Last Updated : 6 ಅಕ್ಟೋಬರ್ 2024, 2:48 IST
ಫಾಲೋ ಮಾಡಿ
Comments

ಪೂಂಚ್(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಜುಲಾಸ್‌ನಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸೇನೆಯ ರೋಮಿಯೊ ಪಡೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿದ ಸೇನೆ, ಭಯೋತ್ಪಾದಕರಿಗೆ ಸೇರಿದ ಚೀಲಗಳನ್ನು ವಶಕ್ಕೆ ಪಡೆದಿದೆ.

ಎಕೆ 47, ಪಾಕಿಸ್ತಾನದಲ್ಲಿ ತಯಾರಿಸಿರುವ ಪಿಸ್ತೂಲ್ ಮತ್ತು ಅತ್ಯಾಧುನಿಕ ಸ್ಫೋಟಕಗಳು, ಚೀನಾ ಗ್ರೆನೇಡ್‌ಗಳು ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕ ಪತ್ತೆಯಾಗಿದೆ.

ಅಕ್ಟೋಬರ್ 5ರಂದು, ವಿಶ್ವಾಸಾರ್ಹ ಮೂಲಗಳ ಮಾಹಿತಿಯ ಆಧಾರದ ಮೇಲೆ ಜುಲಾಸ್ ಪ್ರದೇಶದಲ್ಲಿ ಭಾರತೀಯ ಸೇನೆಯ ರೋಮಿಯೊ ಪಡೆ ಪ್ರಮುಖ ಶೋಧ ಕಾರ್ಯಾಚರಣೆಯನ್ನು ನಡೆಸಿತು. ಶೋಧದ ಸಮಯದಲ್ಲಿ ಶಂಕಿತ ಭಯೋತ್ಪಾದಕರ ಬ್ಯಾಗ್ ಪತ್ತೆಯಾಗಿದ್ದು, ಎಕೆ 47 ಗನ್‌ಗಳು, ಪಾಕಿಸ್ತಾನದ ಪಿಸ್ತೂಲ್, ಹಲವು ಸುತ್ತುಗಳ ಗುಂಡು, ಅತ್ಯಾಧುನಿಕ ಸ್ಫೋಟಕಗಳಾದ ಆರ್‌ಸಿಐಇಡಿ, ಟೈಮ್ಡ್ ಡಿಸ್ಟ್ರಕ್ಷನ್ ಐಇಡಿ, ಸ್ಟವ್ ಐಇಡಿ, ಐಇಡಿ ಸ್ಫೋಟಕಗಳು ಮತ್ತು ಚೈನೀಸ್ ಗ್ರೆನೇಡ್‌ಗಳು ಪತ್ತೆಯಾಗಿವೆ. ಎಲ್ಲವೂ ಬಳಸಲು ಸಿದ್ಧ ಸ್ಥಿತಿಯಲ್ಲಿವೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶದ ದಿನ(ಅ.08) ಯಾವುದೇ ದುಷ್ಕೃತ್ಯ ನಡೆಯದಂತೆ ಎಚ್ಚರ ವಹಿಸಲು ಸೇನೆ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT