ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಳೆದ ವರ್ಷ ಮಾರ್ಚ್ 1ರ ವರೆಗೆ ಮಂಜೂರಾದ 40.35 ಲಕ್ಷ ಹುದ್ದೆಗಳ ಪೈಕಿ 9.79 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ವೆಚ್ಚ ಇಲಾಖೆಯ ಸಂಶೋಧನಾ ಘಟಕ ವರದಿ ನೀಡಿದೆ.

ಈ ಕುರಿತು ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆಗೆ ಮಾಹಿತಿ ನೀಡಿದರು.

ನಾಗರಿಕ ಸೇವಾ ಪರೀಕ್ಷೆ, ವಯೋಮಿತಿ ಸಡಿಲಿಕೆ ಕಾರ್ಯಸಾಧುವಲ್ಲ: ಜಿತೇಂದ್ರ ಸಿಂಗ್

‘ನಿವೃತ್ತಿ, ಬಡ್ತಿ, ರಾಜೀನಾಮೆ, ಸಾವುಗಳ ಕಾರಣದಿಂದಾಗಿ ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇವೆ.ಹುದ್ದೆಗಳ ಸೃಷ್ಟಿ ಮತ್ತು ಭರ್ತಿಯು ಆಯಾ ಸಚಿವಾಲಯದ ಮತ್ತು ಇಲಾಖೆಗಳ ಜವಾಬ್ದಾರಿಯಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿಗೆ ಎಲ್ಲಾ ಸಚಿವಾಲಯ ಹಾಗೂ ಇಲಾಖೆಗಳು ಕಾಲಮಿತಿಯೊಂದಿಗೆ ‘ಮಿಷನ್’ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ’ ಎಂದು ಸಿಂಗ್ ತಿಳಿಸಿದರು.

ವಿವಿಧ ಇಲಾಖೆ ಮತ್ತು ಸಚಿವಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ 10 ಲಕ್ಷ ಜನರನ್ನು ಮುಂದಿನ ಒಂದೂವರೆ ವರ್ಷದೊಳಗೆ ‘ಮಿಷನ್’ ರೀತಿಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.