ಉತ್ತರ ಲಖೀಂಪುರ (ಅಸ್ಸಾಂ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೊ ನ್ಯಾಯ ಯಾತ್ರೆಯು ಶನಿವಾರ ಅಸ್ಸಾಂನ ಲಖೀಂಪುರದ ಭೋಗಿನದಿಯಿಂದ ಮುಂದುವರಿಯಿತು.

ಬಸ್ ಮೂಲಕ ಯಾತ್ರೆ ಆರಂಭವಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು ರಾಹುಲ್ ಗಾಂಧಿ ಅವರಿಗೆ ಶುಭಕೋರಿದರು.
.ಅಸ್ಸಾಂನಲ್ಲಿ ಭಾರತ ಜೋಡೊ ಯಾತ್ರೆಗೆ ಹಲವು ತೊಡಕು: ಜೈರಾಮ್ ರಮೇಶ್ .
ಎರಡು ಬಾರಿ ಬಸ್ನಿಂದ ಇಳಿದ ಅವರು, ಜನರೊಂದಿಗೆ ಮಾತನಾಡುತ್ತಾ ಕೆಲ ದೂರ ನಡೆದರು.

ವೇಳಾಪಟ್ಟಿ ಪ್ರಕಾರ ಯಾತ್ರೆಯು, ಗೋವಿಂದಪುರದಲ್ಲಿ ಬೆಳಗ್ಗಿನ ವಿರಾಮ ಇರಲಿದೆ. ಅಲ್ಲಿ ಹಿರಿಯ ನಾಯಕರಾದ ಜೈರಾಮ್ ರಮೇಶ್, ಜಿತೇಂದ್ರ ಸಿಂಗ್, ಭೂಪೆನ್ ಬೋರಾ ಹಾಗೂ ದೇವಬ್ರತಾ ಸೈಕಿಯಾ ಅವರು ಪತ್ರಿಕಾಗೋಷ್ಟಿ ನಡೆಸಲಿದ್ದಾರೆ.

ಹರುಮುತಿಯಿಂದ ಮಧ್ಯಾಹ್ನದ ಬಳಿಕ ಯಾತ್ರೆ ಮುಂದುವರಿಯಲಿದ್ದು, ಗುಮ್ಟೊ ಮೂಲಕ ಅರುಣಾಚಲ ಪ್ರದೇಶವನ್ನು ಪ್ರವೇಶಿಸಲಿದೆ. ಅಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.
.ಭಾರತ್ ಜೋಡೊ ನ್ಯಾಯ ಯಾತ್ರೆ: ನಾಗಾಲ್ಯಾಂಡ್ ಜನರೊಂದಿಗೆ ರಾಹುಲ್ ಸಂವಾದ.
ಅರುಣಾಚಲದ ಮೈತುನ್ ಗೇಟ್ನಿಂದ ಇಟಾನಗರದವರೆಗೆ ಪಾದಯಾತ್ರೆ ಮೂಲಕ ಸಾಗಿ, ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಇಟಾನಗರ ಸಮೀಪದ ಚಿಂಪು ಗ್ರಾಮದಲ್ಲಿ ಯಾತ್ರೆ ತಂಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.