ಮುಂಬೈ: ಎನ್ಸಿಪಿ ಮುಖಂಡ ಬಾಬಾ ಸಿದ್ದೀಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಮುಂಬೈ ಪೊಲೀಸರು ಹರಿಯಾಣದಲ್ಲಿ ಮಂಗಳವಾರ ಸಂಜೆ ಬಂಧಿಸಿದ್ದಾರೆ.

ಅಮಿತ್ ಹಿಸಾಮ್ಸಿಂಗ್ ಕುಮಾರ್ (29) ಬಂಧಿತ. ಹರಿಯಾಣದಿಂದ ಈತನನ್ನು ಮುಂಬೈಗೆ ಬುಧವಾರ ಬೆಳಿಗ್ಗೆ ಕರೆತಂದಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲಿರುವ ಶೂಟರ್ ಗುರ್ಮೇಲ್ ಸಿಂಗ್ ಹಾಗೂ ನಾಪತ್ತೆಯಾಗಿರುವ ಪ್ರಕರಣದ ಸೂತ್ರಧಾರಿ ಮೊಹಮ್ಮದ್ ಜೀಶನ್ ಅಖ್ತರ್ ನಡುವೆ ಅಮಿತ್ ಪ್ರಮುಖ ಕೊಂಡಿಯಾಗಿದ್ದ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಸಿದ್ದೀಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಶದಲ್ಲಿರುವ ಆರೋಪಿಗಳ ಸಂಖ್ಯೆ ಈಗ 11ಕ್ಕೆ ಏರಿಕೆಯಾಗಿದೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.