ನವದೆಹಲಿ: ಬೈಸಾಖಿ ಆಚರಣೆಗಾಗಿ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಬಯಸುವ ಭಾರತೀಯ ಯಾತ್ರಾರ್ಥಿಗಳಿಗೆ ಸುಮಾರು 2,200 ವೀಸಾಗಳನ್ನು ನೀಡಿರುವುದಾಗಿ ಗುರುವಾರ ಪಾಕಿಸ್ತಾನದ ಹೈಕಮಿಷನ್ ಹೇಳಿದೆ.

'ಬೈಸಾಖಿ ಆಚರಣೆಗೆ ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಪಾಕಿಸ್ತಾನಕ್ಕೆ ಆಗಮಿಸಲು ಸುಮಾರು 2,200 ವೀಸಾಗಳನ್ನು ಕೊಡಲಾಗಿದೆ. ಏಪ್ರಿಲ್ 12ರಿಂದ 21ರ ವರೆಗೆ ನಡೆಯಲಿರುವ ಹಲವಾರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವ ಉದ್ದೇಶದಿಂದ ವೀಸಾಗಳನ್ನು ಕೊಡಲಾಗಿದೆ' ಎಂದು ಪಾಕಿಸ್ತಾನದ ಹೈಕಮಿಷನ್ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನ ಭೇಟಿ ಸಂದರ್ಭ ಯಾತ್ರಾರ್ಥಿಗಳು ಪಂಜಾ ಸಾಹಿಬ್, ನನಕಾನಾ ಸಾಹಿಬ್, ಕರ್ತಾರ್ಪುರ್ ಸಾಹಿಬ್ ಗುರುದ್ವಾರಗಳಿಗೆ ಭೇಟಿ ನೀಡಬಹುದಾಗಿದೆ.

ಉಭಯ ರಾಷ್ಟ್ರಗಳ ಶಿಷ್ಟಾಚಾರದ ಅಡಿಯಲ್ಲಿ ಪ್ರತಿ ವರ್ಷ ಪಾಕಿಸ್ತಾನದಲ್ಲಿರುವ ಧಾರ್ಮಿಕ ಕ್ಷೇತ್ರಗಳಿಗೆ ಭಾರತದ ಸಿಖ್ ಮತ್ತು ಹಿಂದೂ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಪಾಕಿಸ್ತಾನದ ಯಾತ್ರಾರ್ಥಿಗಳೂ ಪ್ರತಿ ವರ್ಷ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಬರುತ್ತಾರೆ.

ಬಾಂಗ್ಲಾ ಪಿಎಂ ಹಸೀನಾ ಇಸ್ಲಾಂ ಮೂಲಭೂತವಾದಿಗಳ ತಾಯಿ: ತಸ್ಲಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.