ಪಾಟ್ನಾ: ಬಿಹಾರದಲ್ಲಿ 5 ವರ್ಷಗಳಿಂದ ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದ 64 ವೈದ್ಯರನ್ನು ಬಿಹಾರ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಆರೋಗ್ಯ ಇಲಾಖೆಯ ಶಿಫಾರಸ್ಸಿನಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಿಹಾರದ ಅರಾರಿಯಾ, ಔರಂಗಾಬಾದ್, ಬಂಕಾ, ಭಾಗಲ್ಪುರ, ಭೋಜ್ಪುರ ಮತ್ತು ದರ್ಬಂಗಾ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವೈದ್ಯರನ್ನು ಹೊಸದಾಗಿ ನಿಯೋಜಿಸಲಾಗಿದೆ.

ಈ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್ ಸಿದ್ಧಾರ್ಥ್, ಈ ಹಿಂದೆ ಸಂಬಂಧಪಟ್ಟ ವೈದ್ಯರಿಗೆ ಅನುಪಸ್ಥಿತಿಯ ಕಾರಣ ತಿಳಿಸಲು ಅವಕಾಶ ನೀಡಲಾಗಿತ್ತು. ಆದರೆ ವೈದ್ಯರು ಪ್ರತ್ಯುತ್ತರಗಳನ್ನು ನೀಡಿರಲಿಲ್ಲ. ಸರ್ಕಾರಿ ಅಧಿಕಾರಿಗಳು ಅನಧಿಕೃತವಾಗಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಕರ್ತವ್ಯಕ್ಕೆ ಗೈರುಹಾಜರಾಗುವಂತಿಲ್ಲ ಎಂದು ಹೇಳಿದರು

ಇದನ್ನು ಓದಿ: ನಾನಲ್ಲ, ಮಹಿಳೆಯೇ ಮೂತ್ರ ಮಾಡಿಕೊಂಡಿರಬಹುದು: ಕೋರ್ಟ್ಗೆ ಶಂಕರ್ ಮಿಶ್ರಾ ಹೇಳಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.