ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿವಾಸಿಗಳ ಕೊಡುಗೆಗೆ ತಕ್ಕ ಮನ್ನಣೆ ಸಿಕ್ಕಿಲ್ಲ: ಪ್ರಧಾನಿ ಮೋದಿ

Published : 15 ನವೆಂಬರ್ 2024, 16:02 IST
Last Updated : 15 ನವೆಂಬರ್ 2024, 16:02 IST
ಫಾಲೋ ಮಾಡಿ
Comments
ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶುಕ್ರವಾರ ದೆಹಲಿಯ ರಿಂಗ್ ರೋಡ್‌ನಲ್ಲಿರುವ ಬಾನ್ಸೆರಾ ಪಾರ್ಕ್‌ನ ಪ್ರವೇಶದ್ವಾರದಲ್ಲಿ ಮುಂಡಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಪಿಟಿಐ ಚಿತ್ರ –––––––

ಬಿಹಾರದ ಜಮುಯಿಯಲ್ಲಿ ಭಗವಾನ್‌ ಬಿರ್ಸಾ ಮುಂಡಾ ಅವರ 150 ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಆದಿವಾಸಿ ಗೌರವ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆದಿವಾಸಿ ಸಮುದಾಯದ ನಾಯಕ  ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು ಪಿಟಿಐ ಚಿತ್ರ

ಬಿರ್ಸಾ ಮುಂಡಾ ಪ್ರತಿಮೆ ಅನಾವರಣ
ನವದೆಹಲಿ (ಪಿಟಿಐ): ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಇಲ್ಲಿನ ವರ್ತುಲ ರಸ್ತೆಯಲ್ಲಿರುವ ಬಾನ್ಸೆರಾ ಪಾರ್ಕ್‌ನಲ್ಲಿ ಮುಂಡಾ ಅವರ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದರು. ಪ್ರತಿಮೆಯು ಸುಮಾರು 3000 ಕೆ.ಜಿ ತೂಕದ್ದಾಗಿದೆ. 2025ರ ನವೆಂಬರ್ 15 ರವರೆಗೆ ಇಡೀ ವರ್ಷ ‘ಆದಿವಾಸಿ ಗೌರವ ದಿನ’ ಎಂದು ಆಚರಿಸಲಾಗುತ್ತದೆ ಎಂದು ಅವರು ಹೇಳಿದರು.  
‘ಆದಿವಾಸಿಗಳಿಗೆ ಸುಳ್ಳು ಭರವಸೆ’
ನವದೆಹಲಿ (ಪಿಟಿಐ): ಆದಿವಾಸಿಗಳಿಗೆ ನ್ಯಾಯ ಒದಗಿಸುವ ಬದಲು ಕೇಂದ್ರ ಸರ್ಕಾರ ಅವರ ‘ಕತ್ತು ಹಿಸುಕಲು’ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಶುಕ್ರವಾರ ಆರೋಪಿಸಿದರು. ‘ಜಮುಯಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನವನ್ನು ಆಚರಿಸುವ ವೇಳೆ ಪ್ರಧಾನಿ ಅವರು ಆದಿವಾಸಿಗಳಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ. ಇದರಿಂದ ನಾವು ಮೂರ್ಖರಾಗಬಾರದು. ಅವರ ಧರ್ತಿ ಆಬಾ ಜಂಜಾಟಿಯಾ ಗ್ರಾಮ್ ಉತ್ಕರ್ಷ್‌ ಅಭಿಯಾನವು (ಡಿಎಜೆಜಿಯುಎ) ಅರಣ್ಯ ಹಕ್ಕುಗಳ ಕಾಯಿದೆ (2006) ಮತ್ತು ಆದಿವಾಸಿ ಸ್ವ-ಆಡಳಿತದ ಸಂಪೂರ್ಣ ಅಪಹಾಸ್ಯವಲ್ಲದೆ ಬೇರೆನೂ ಅಲ್ಲ’ ಎಂದು ಅವರು ‘ಎಕ್ಸ್‌’ನಲ್ಲಿ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT