‘ಉದ್ಯಮಿಗಳ ಸಾಲಮನ್ನಾ’
‘ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು 25 ಉದ್ಯಮಿಗಳ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರಿಗೆ ನೆರವಾಗುವ ಉದ್ದೇಶದಿಂದ ಯುಪಿಎ ಅವಧಿಯಲ್ಲಿ ಮಾಡಿದ್ದ ₹72 ಸಾವಿರ ಕೋಟಿ ಸಾಲಮನ್ನಾದ ಕುರಿತು ಆರೋಪ ಮಾಡುತ್ತಿದೆ’ ಎಂದು ಆರೋಪಿಸಿದರು. ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ರೈತರ ಸಾಲಮನ್ನಾ ಮಾಡಿದೆಯಾ..? ಮಾಡಿಲ್ಲ.
ಏಕೆಂದರೆ ನೀವೆಲ್ಲರೂ, ಬುಡಕಟ್ಟು, ದಲಿತ ಹಾಗೂ ಹಿಂದುಳಿದ ಸಮುದಾಯ ದವರು. ಬಿಜೆಪಿ ಎಂದಿಗೂ ನಿಮ್ಮ ಸಾಲಮನ್ನಾ ಮಾಡುವುದಿಲ್ಲ’ ಎಂದರು.
ಸಿಮ್‌ಡೆಗಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ,
‘ರಾಜ್ಯದ ಬುಡಕಟ್ಟು ಸಮುದಾಯದಿಂದ ಬಿಜೆಪಿಯು ಜಲ್, ಜಂಗಲ್, ಜಮೀನು (ನೀರು, ಅರಣ್ಯ, ಭೂಮಿ) ಕಿತ್ತುಕೊಳ್ಳಲಿದೆ’ ಎಂದು ದೂರಿದರು.
ಈ ಚುನಾವಣೆಯು ಇಂಡಿಯಾ ಒಕ್ಕೂಟ ಹಾಗೂ ಬಿಜೆಪಿ–ಆರ್‌ಎಸ್‌ಎಸ್ ಸಿದ್ದಾಂತದ ನಡುವಿನ ಚುನಾವಣೆಯಾಗಿದೆ ಎಂದು ಪ್ರತಿಪಾದಿಸಿದರು.