ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Jharkhand Assembly Polls: ಬಿಜೆಪಿ ಪ್ರಣಾಳಿಕೆ ಬಿಡುಗಡೆ

Published : 5 ಅಕ್ಟೋಬರ್ 2024, 21:17 IST
Last Updated : 5 ಅಕ್ಟೋಬರ್ 2024, 21:17 IST
ಫಾಲೋ ಮಾಡಿ
Comments

ರಾಂಚಿ: ಜಾರ್ಖಂಡ್‌ ವಿಧಾನಸಭೆ ಚುನಾವಣೆಗೆ ಬಿಜೆಪಿಯು ತನ್ನ ಪ್ರಣಾಳಿಕೆಯ ಐದು ಭರವಸೆಗಳನ್ನು ಶನಿವಾರ ಘೋಷಿಸಿದೆ. 

ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ‘ಗೋಗೋ ದೀದಿ’ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು ₹2,100 ಆರ್ಥಿಕ ನೆರವು, ಯುವಕರಿಗೆ 5 ಲಕ್ಷ ಉದ್ಯೋಗ, ಅರ್ಹರಿಗೆ ವಸತಿ ಸೌಲಭ್ಯ, ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ₹500ಕ್ಕೆ ಇಳಿಕೆ ಮಾಡಲಾಗುವುದು ಹಾಗೂ ಒಂದು ವರ್ಷದಲ್ಲಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಅಲ್ಲದೇ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎರಡು ವರ್ಷಗಳವರೆಗೆ ಮಾಸಿಕ ₹2000 ನೆರವು ನೀಡಲಾಗುವುದು ಎಂಬ 5 ಅಂಶಗಳನ್ನು ಬಿಜೆಪಿ ಜನರ ಮುಂದಿಟ್ಟಿತು. 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಕೇಂದ್ರ ಸಚಿವ ಶಿವರಾಜ್ ಸಿಂಗ್‌ ಚೌಹಾಣ್‌ ಅವರ ಸಮ್ಮುಖದಲ್ಲಿ ಜಾರ್ಖಂಡ್‌ ಬಿಜೆಪಿ ಅಧ್ಯಕ್ಷ ಬಾಬುಲಾಲ್‌ ಮರಾಂಡಿ ಅವರು ‘ಪಂಚ ಪ್ರಾಣ’ (ಐದು ಪ್ರತಿಜ್ಞೆ) ಮೂಲಕ ಪ್ರಣಾಳಿಕೆಯ ಐದು ಅಂಶಗಳನ್ನು ಘೋಷಿಸಿದರು. 

ಈ ವರ್ಷಾಂತ್ಯದಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT