ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಾದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

Published : 6 ಅಕ್ಟೋಬರ್ 2024, 9:54 IST
Last Updated : 6 ಅಕ್ಟೋಬರ್ 2024, 9:54 IST
ಫಾಲೋ ಮಾಡಿ
Comments

ನವದೆಹಲಿ: ಬಿಜೆಪಿಯು ಗೋವಾದಲ್ಲಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಭಾನುವಾರ ಆರೋಪಿಸಿದ್ದಾರೆ.

ಗೋವಾ ಕುರಿತು ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, ನೈಸರ್ಗಿಕ ಸೌಂದರ್ಯ, ವೈವಿಧ್ಯತೆ, ಸಾಮರಸ್ಯದಿಂದ ಕೂಡಿದ ಜನರ ಪ್ರೀತಿ ಮತ್ತು ಆತಿಥ್ಯವೇ ರಾಜ್ಯದ ಆಕರ್ಷಣೆ ಎಂದು ಶ್ಲಾಘಿಸಿದ್ದಾರೆ.

'ದುರಾದೃಷ್ಟವಶಾತ್‌, ಬಿಜೆಪಿ ಆಡಳಿತದಲ್ಲಿ ಈ ಸಾಮರಸ್ಯದ ಮೇಲೆ ದಾಳಿಯಾಗುತ್ತಿದೆ. ಬಿಜೆಪಿಯು ಉದ್ದೇಶಪೂರ್ವಕವಾಗಿ ಕೋಮು ಸಂಘರ್ಷವನ್ನು ಉಂಟುಮಾಡುತ್ತಿದೆ. ಆರ್‌ಎಸ್‌ಎಸ್‌ ನಾಯಕರು ಕ್ರಿಶ್ಚಿಯನ್ನರನ್ನು ಪ್ರಚೋಧಿಸುತ್ತಿದ್ದಾರೆ. ಸಂಘಟನೆಗಳು ಮುಸ್ಲಿಮರ ಮೇಲೆ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುತ್ತಿವೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಸಂಘ ಪರಿವಾರವು ಇಂತಹದೇ ಕೃತ್ಯಗಳನ್ನು ನಿರ್ಭೀತಿಯಿಂದ ಮತ್ತು ಉನ್ನತ ಮಟ್ಟದ ಬೆಂಬಲದೊಂದಿಗೆ ಭಾರತದಾದ್ಯಂತ ನಡೆಸುತ್ತಿದೆ' ಎಂದು ದೂರಿದ್ದಾರೆ.

'ಗೋವಾದಲ್ಲಿ ಬಿಜೆಪಿಯ ಯೋಜನೆಯು ಸ್ಪಷ್ಟವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಅಕ್ರಮವಾಗಿ ಗ್ರೀನ್‌ಲ್ಯಾಂಡ್‌ಗಳಾಗಿ ಮಾರ್ಪಾಡು ಮಾಡುವ ಮೂಲಕ ಮತ್ತು ಪರಿಸರ ನಿಯಮಗಳನ್ನು ಕಡೆಗಣಿಸುವ ಮೂಲಕ ಜನರನ್ನು ವಿಭಜಿಸಲಾಗುತ್ತಿದೆ. ಇದು ಗೋವಾದ ಸ್ವಾಭಾವಿಕ ಮತ್ತು ಸಾಮಾಜಿಕ ಪರಂಪರೆ ಮೇಲಿನ ದಾಳಿ' ಎಂದು ಪ್ರತಿಪಾದಿಸಿದ್ದಾರೆ.

'ಬಿಜೆಪಿಯ ಪ್ರಯತ್ನಗಳಿಗೆ ತಡೆಯೊಡ್ಡಲಾಗುವುದು. ಇಂತಹ ವಿಭಜಕ ಕಾರ್ಯಸೂಚಿಯನ್ನು ಗಮನಿಸುತ್ತಿರುವ ಗೋವಾ ಜನರು ಮತ್ತು ಇಡೀ ಭಾರತ ಒಂದಾಗಿ ನಿಂತಿದೆ' ಎಂದು ರಾಹುಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT